Saturday, August 15, 2026

BDA Apartments

Home Front Page ಎಲೆಕ್ಷನ್ ಸಿದ್ಧತೆ: ಕೇಂದ್ರ ಚುನಾವಣ ಆಯೋಗದ ಅಧಿಕಾರಿಗಳ ರಾಜ್ಯ ಪ್ರವಾಸ

ಎಲೆಕ್ಷನ್ ಸಿದ್ಧತೆ: ಕೇಂದ್ರ ಚುನಾವಣ ಆಯೋಗದ ಅಧಿಕಾರಿಗಳ ರಾಜ್ಯ ಪ್ರವಾಸ

ಬೆಂಗಳೂರು, ಫೆಬ್ರವರಿ 12, 2023 (www.justkannada.in): ರಾಜ್ಯಕ್ಕೆ ಕೇಂದ್ರ ಚುನಾವಣಾ ಆಯೋಗದ 3 ತಂಡಗಳು ರಾಜ್ಯ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಿವೆ.

ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ ಕೇಂದ್ರ ಚುನಾವಣ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ಇದೀಗ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಪೂರ್ವತಯಾರಿಗಳ ಪರಿಶೀಲನೆ ಗಾಗಿ ಕೇಂದ್ರ ಚುನಾವಣ ಆಯೋಗದ 3 ತಂಡಗಳು ರಾಜ್ಯ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ.

ಚುನಾವಣೆ ಸಿದ್ಧತೆ, ಮತದಾರರ ಪಟ್ಟಿ ಮತ್ತಿತರ ಪ್ರಕ್ರಿಯೆ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ಸಮಾಲೋಚಿಸಿ ಇವಿಎಂ ಮತ್ತು ವಿವಿಪ್ಯಾಟ್‌ಗಳ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಲಾಗಿದೆ.

ಕೇಂದ್ರ ಚುನಾವಣ ಆಯೋಗದ ಉಪ ಮುಖ್ಯ ಆಯುಕ್ತರಾದ ಅಜಯ್‌ ಬಾಡು ನೇತೃತ್ವದ ತಂಡ ಅಧಿಕಾರಿಗಳೊಂದಿಗೆ ಚುನಾವಣ ಪೂರ್ವ ತಯಾರಿ ಕುರಿತಂತೆ ಸಭೆ ನಡೆಸಿದ್ದಾರೆ.