ಏಷ್ಯನ್ ಗೇಮ್ಸ್: ಚಿನ್ನದ ಪದಕ ಗೆದ್ದು ಒಲಂಪಿಕ್ಸ್ ಅರ್ಹತೆ ಪಡೆದ ಭಾರತದ ಹಾಕಿ ತಂಡ.

Promotion

ನವದೆಹಲಿ,ಅಕ್ಟೋಬರ್,6,2023(www.justkannada.in): ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಹಾಕಿ ತಂಡ ಚಿನ್ನದ ಪದಕ ಗೆದ್ದು ಒಲಂಪಿಕ್ಸ್ ಅರ್ಹತೆ ಪಡೆದಿದೆ.

ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಜಪಾನ್  ವಿರುದ್ಧ 5-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಚಿನ್ನದ ಪದಕ ಗೆದ್ದ  ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್   ಅರ್ಹತೆ ಪಡೆದಿದೆ.

2023ರ ಏಷ್ಯನ್ ಗೇಮ್ಸ್’ನಲ್ಲಿ ಭಾರತ 100 ಪದಕಗಳ ಗಡಿ ದಾಟುವುದು ಖಚಿತವಾಗಿದೆ. ಇನ್ನು ಇದಕ್ಕೂ ಮುನ್ನ ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಸೋನಮ್ ಮತ್ತು ಕಿರಣ್ ಚೀನಾದ ಜಿಯಾ ಲಾಂಗ್ ಅವರನ್ನ ಸೋಲಿಸಿ ಕಂಚಿನ ಪದಕ ಗೆದ್ದರು.

ನಾಳೆ ಅಫ್ಘಾನಿಸ್ತಾನದ ವಿರುದ್ದ ಭಾರತ ಕ್ರಿಕೆಟ್ ತಂಡ ಫೈನಲ್ ಪಂದ್ಯವಾಡಲಿದ್ದು ಗೆದ್ದರೇ ಚಿನ್ನದ ಪದಕಕ್ಕೆ ಮುತ್ತಿಕ್ಕಲಿದೆ.

Key words: Asian Games-  Indian hockey- team- winning -gold medal.