ಪೋಲಿಸರ ಸೋಗಿನಲ್ಲಿ ಬಂದು ಚಿನ್ನಾಭರಣ ಮತ್ತು ದಾಖಲೆ ಪತ್ರಗಳನ್ನ ದೋಚಿದ್ದ ನಾಲ್ವರು ಆರೋಪಿಗಳು ಅಂದರ್..

ಬೆಂಗಳೂರು,ನವೆಂಬರ್,15,2020(www.justkannada.in):  ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ಅಂಗಡಿ ಮೇಲೆ ದಾಳಿ ನಡೆಸಿದ  ಖದೀಮರು ಅಂಗಡಿಯಲ್ಲಿದ್ದ 800 ಗ್ರಾಂ ಚಿನ್ನ ಹಾಗೂ ದಾಖಲೆ ಪತ್ರಗಳನ್ನು ದೋಚಿ ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.kannada-journalist-media-fourth-estate-under-loss

ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿನ್ನಾಭರಣ ಪಾಲಿಶ್ ಅಂಗಡಿ ಗೀತಾ ಜುವೆಲರ್ಸ್ ನಲ್ಲಿ ಖದೀಮರ ಗುಂಪು ದರೋಡೆ ಮಾಡಿದೆ.  ಅಂಗಡಿಗೆ ನುಗ್ಗಿದ 6 ಜನರ ಗುಂಪು ತಾವು ಪೊಲೀಸರು, ನಿಮ್ಮ ಅಂಗಡಿಯಲ್ಲಿ ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಬಗ್ಗೆ ಆರೋಪ ಕೇಳಿಬಂದಿದೆ. ಹಾಗಾಗಿ ರೇಡ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಂತರ ಪರಿಶೀಲನೆ ನೆಪದಲ್ಲಿ 800 ಗ್ರಾಂ ಚಿನ್ನ, ದಾಖಲೆಗಳನ್ನು ದೋಚಿ ಪರಾರಿಯಾಗಿದ್ದಾರೆ.

ಬಳಿಕ ಜುವೆಲರ್ಸ್ ಮಾಲೀಕ ಕಾರ್ತಿಕ್ ಎಂಬುವವರಿಗೆ ಫೋನ್ ಮಾಡಿದ ಖದೀಮರು, ನಾವು ಪೊಲೀಸರು ನಿಮ್ಮ ಅಂಗಡಿ ಮೇಲೆ ರೇಡ್ ಮಾಡಿದ್ದೇವೆ. ಪೊಲೀಸ್ ಠಾಣೆಗೆ ಬಂದು ವಿಚಾರಿಸಿ ಎಂದಿದ್ದಾರೆ. ಈ ವೇಳೆ ಕಾರ್ತಿಕ್ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಗೆ ಬಂದು ವಿಚಾರಿಸಿದಾಗ ಪೊಲೀಸರ ಸೋಗಿನಲ್ಲಿ ಬಂದ ಕಳ್ಳರು ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ ಎನ್ನಲಾಗಿದೆ. arrest-four-accused-robbed-jewelery-documents-bangalore

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Key words: arrest-four- accused – robbed – jewelery – documents-bangalore