ಗೋಲ್ಡ್ ಫೈನಾನ್ಸ್ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪಿ ಅಂದರ್…

Promotion

ಮೈಸೂರು,ಮಾರ್ಚ್,4,2021(www.justkannada.in): ಗೋಲ್ಡ್ ಫೈನಾನ್ಸ್ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ  ಆರೋಪಿಯನ್ನ ಲಷ್ಕರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.jk

ಬಾಲಾಜಿ ಗೋಲ್ಡ್ ಫೈನಾನ್ಸ್ ಮಾಲೀಕ ಮಂಜುನಾಥ್(42)  ಬಂಧಿತ ಆರೋಪಿ. ಈತ ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣಗಳಿಗೆ ಹಣದ ಆಮಿಷ ಒಡ್ಡುತ್ತಿದ್ದನು. ಗ್ರಾಹಕರಿಂದ ಕಡಿಮೆ ಬೆಲೆ ನೀಡಿ ಚಿನ್ನಾಭರಣಗಳನ್ನು ಪಡೆಯುತ್ತಿದ್ದ  ಮಂಜುನಾಥ್ ಆ ಚಿನ್ನಾಭರಣಗಳನ್ನ ಹೆಚ್ಚಿನ ಬೆಲೆಗೆ ಗಿರವಿ ಇಡುತ್ತಿದ್ದ.

ಅಲ್ಲದೆ ಚಿನ್ನಾಭರಣಗಳನ್ನು ಪಡೆದು ವಾಪಸ್ ಕೊಡದೆ ಈತ ಮೋಸ ಮಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ಮಂಜುನಾಥ್ ಅಂಗಡಿ ಬಾಗಿಲು ಹಾಕಿ ತಲೆಮರೆಸಿ ಓಡಾಡಿಕೊಂಡಿದ್ದ. ಈ ಕುರಿತು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪೊಲೀಸರು ಆರೋಪಿ ಮಂಜುನಾಥ್ ನನ್ನ ಬಂಧಿಸಿದ್ದಾರೆ.  arrest-accused-mysore-frauding-public-name-gold-finance

ಬಂಧಿತನಿಂದ  22, 35,00 ಮೌಲ್ಯದ 579.38 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಲಷ್ಕರ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್, ಪಿಎಸ್ಐ ಗೌತಮ್ ಗೌಡ, ಧನಲಕ್ಷ್ಮಿ ಸೇರಿದಂತೆ ಸಿಬ್ಬಂದಿ ಭಾಗಿಯಾಗಿದ್ದರು.

Key words: Arrest-accused-mysore- frauding – public – name – Gold Finance.