ನಕಲಿ ದಾಖಲೆ ನೀಡಿ 7 ಲಕ್ಷ ವಾಹನ ಸಾಲ ಪಡೆದು ವಂಚಿಸಿದ್ದ ಆರೋಪಿ ಅಂದರ್…

Promotion

ದಕ್ಷಿಣ ಕನ್ನಡ,ಡಿ,27,2019(www.justkannada.in): ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಇರುವ ಸುಮಂಗಲ ಕೋ. ಆಪರೇಟಿವ್ ಸೊಸೈಟಿಯಲ್ಲಿ ನಕಲಿ ದಾಖಲಾತಿಗಳನ್ನು ನೀಡಿ 7 ಲಕ್ಷ ವಾಹನ ಸಾಲ ಪಡೆದು ವಂಚಿಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬಶೀರ್ ಯಾನೆ ಹಸನ್ ಬಶೀರ್,(42)   ಬಂಧಿತ ಆರೋಪಿ. ಮಂಗಳೂರಿನ ಶೆಟ್ಟಿ ಅಪಾರ್ಟ್ ಮೆಂಟ್, ಪಂಪ್ ವೆಲ್ ನಲ್ಲಿ ವಾಸವಿದ್ದ  ಬಶೀರ್ ಯಾನೆ ಹಸನ್ ಬಶೀರ್ ವಿರುದ್ದ ನಕಲಿ ದಾಖಲೆ ನೀಡಿ ಸಾಲಪಡೆದು ವಂಚನೆ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ  5/11/2019 ರಂದು ಕಲಂ 420,468 ಯಂತೆ ಪ್ರಕರಣ ದಾಖಲಾಗಿತ್ತು.

ಆರೋಪಿ  ಬಶೀರ್ ನನ್ನ ಬಂಧಿಸಲಾಗಿದ್ದು ವಿಚಾರಣೆ ಮಾಡಲಾಗಿ ಈತನು CARVAN AUTOMOBILES” ವಿವಿಧ ಕಂಪೆನಿಯ ಕಾರು ಮಾರಾಟಗಾರರು ಎಂಬ ಹೆಸರಿನಲ್ಲಿ ನಕಲಿ ಸಂಸ್ಥೆ ಮಾಡಿಕೊಂಡಿದ್ದು, ಅದರ ಹೆಸರಿನಲ್ಲಿ ನಕಲಿ ದಾಖಲಾತಿ ನೀಡಿ ಸುಮಂಗಲ ಕೋ. ಆಪರೇಟಿವ್ ಸೊಸೈಟಿಯಲ್ಲಿ ಸಾಲ ಪಡೆದು ವಂಚಿಸಿರುವುದಾಗಿದೆ. ಅಲ್ಲದೇ ಬಶೀರ್ “CARVAN AUTOMOBILES” ಎಂಬ ಅಸ್ತಿತ್ವದಲ್ಲಿರುವ ಕಾರು ಮಾರಾಟ ಸಂಸ್ಥೆಯ ಹೆಸರಿನಲ್ಲಿ ಮಂಗಳೂರು, ಬಂಟ್ವಾಳ, ವಿಟ್ಲ, ಮೂಡಬಿದ್ರೆ ವಿವಿಧ ಬ್ಯಾಂಕ್ ಗಳಿಗೆ ಬೇರೆಯವರ ಹೆಸರಿನಲ್ಲಿ ಕೊಟೇಶನ್ ನೀಡಿ ಸುಮಾರು 2 ಕೋಟಿ ರೂಪಾಯಿ ಅಧಿಕ ಹಣ ಪಡೆದಿರುವ ಮಾಹಿತಿ  ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದ್ದು,  ತನಿಖೆ ಮುಂದುವರೆದಿದೆ.

Key words: arrest- accused – Fraud -Rs 7 lakh -vehicle loan