ಕೊಲ್ಲಿ ರಾಷ್ಟ್ರಗಳಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರಲು ವಿಮಾನ ವ್ಯವಸ್ಥೆ ಕಲ್ಪಿಸಿ: ಕೇಂದ್ರ ಸಚಿವ ಸದಾನಂದಗೌಡ

Promotion

ಬೆಂಗಳೂರು, 26, 2020 (www.justkannada.in): ಕೊಲ್ಲಿ ರಾಷ್ಟ್ರಗಳಲ್ಲಿರುವ ಕನ್ನಡಿಗರಿಗೆ ರಾಜ್ಯಕ್ಕೆ ಮರಳಲು ವಿಮಾನ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಹಾಗೂ ಸುರೇಶ್ ಅಂಗಡಿ ಪತ್ರ ಬರೆದು ಮನವಿ ಮಾಡಿದ್ದಾರೆ.

ವಂದೇ ಭಾರತ್ ಮಿಷನ್ 3ನೆ ಹಂತದಲ್ಲಿ ಗಲ್ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಯಾವುದೇ ವಿಮಾನ ಸೇವೆ ಕಲ್ಪಿಸಿಲ್ಲ, ಸಾವಿರಾರು ಕನ್ನಡಿಗರು ಗಲ್ ನಲ್ಲಿದ್ದಾರೆ. ಅವರೆಲ್ಲರನ್ನೂ ರಾಜ್ಯಕ್ಕೆ ವಾಪಸ್ ಕರೆತರಲು ಸಹಕಾರ ನೀಡಬೇಕು. ಈ ಹಿಂದೆಯೂ ರಾಜ್ಯಕ್ಕೆ ವಿಮಾನ ಇರಲಿಲ್ಲ ನನ್ನ ಮನವಿ ನಂತರ ಬೆಂಗಳೂರು ಹಾಗು ಮಂಗಳೂರಿಗೆ ಮೂರು ವಿಮಾನ ಸೇರಿಸಲಾಯಿತು. ಇದಕ್ಕಾಗಿ ಧನ್ಯವಾದ ಹೇಳಿದ್ದಾರೆ.

ಹಾಗೆಯೇ ಈಗ ಮತ್ತೊಮ್ಮೆ ವಿಮಾನ ಸೌಲಭ್ಯ ಕಲ್ಪಿಸಿ ಗಲ್ ಕನ್ನಡಿಗರು ರಾಜ್ಯಕ್ಕೆ ಮರಳಲು ಅವಕಾಶ ಕಲ್ಪಿಸಿ ಎಂದು ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಸದಾನಂದ ಗೌಡ ಹಾಗೂ ಸುರೇಶ್ ಅಂಗಡಿ ಪತ್ರ ಬರೆದಿದ್ದಾರೆ.