Thursday, August 13, 2026

BDA Apartments

Home Front Page ಮುಂದಿನ 6 ತಿಂಗಳು ವಲಸೆ ಕಾರ್ಮಿಕರ ಖಾತೆಗೆ 10 ಸಾವಿರ ರೂ. ಹಾಕಿ: ಮಲ್ಲಿಕಾರ್ಜುನ ಖರ್ಗೆ...

ಮುಂದಿನ 6 ತಿಂಗಳು ವಲಸೆ ಕಾರ್ಮಿಕರ ಖಾತೆಗೆ 10 ಸಾವಿರ ರೂ. ಹಾಕಿ: ಮಲ್ಲಿಕಾರ್ಜುನ ಖರ್ಗೆ ಸಲಹೆ

ಬೆಂಗಳೂರು, ಮೇ 26, 2020 (www.justkannada.in): ವಲಸೆ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕುವುದರಿಂದ ಅವರಿಗೆ ಸಹಾಯವಾದಂತಾಗುತ್ತದೆ. ಮುಂದಿನ ಆರು ತಿಂಗಳುಗಳ ಕಾಲ ಪ್ರತಿ ತಿಂಗಳು 10 ಸಾವಿರ ರೂ.ಗಳನ್ನು ವಲಸೆ ಕಾರ್ಮಿಕರಿಗೆ ನೇರವಾಗಿ ನೀಡಿ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರ ಕೋವಿಡ್-19 ಸಂಕಷ್ಟದಿಂದ ಜನರನ್ನು ಪಾರು ಮಾಡಲು ಘೋಷಿಸಿರುವ 20 ಲಕ್ಷ ಕೋಟಿ ಪರಿಹಾರ ಯಾರಿಗೂ ಪ್ರಯೋಜನಕ್ಕೆ ಬಾರದಂತಿದೆ ಎಂದು ಆರೋಪಿಸಿದ್ದಾರೆ. 10 ಸಾವಿರ ರೂ.ಗಳನ್ನು ಅವರ ಖಾತೆಗೆ ಹಾಕುವುದರಿಂದ ವಲಸೆ ಕಾರ್ಮಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾಯವಾಗುವುದಲ್ಲದೇ ಆರ್ಥಿಕತೆಗೆ ಉತ್ತೇಜನವೂ ದೊರೆಯಲಿದೆ ಎಂದು ಹೇಳಿದ್ದಾರೆ.

ವಲಸೆ ಕಾರ್ಮಿಕರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವಂತೆ ದೇಶದ ಪ್ರಮುಖ ಉದ್ಯಮಿಗಳು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದ್ದಾರೆ.