ಸೇನಾ ದಿನಾಚರಣೆ: ಭಾರತೀಯ ಯೋಧರ ಸೇವೆ ಸ್ಮರಿಸಿದ ಪ್ರಧಾನಿ ಮೋದಿ

Promotion

ಬೆಂಗಳೂರು, ಜನವರಿ 15, 2023 (www.justkannada.in): ಸೇನಾ ದಿನ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ಸೈನಿಕರು ಸದಾಕಾಲ ನಮ್ಮ ದೇಶವನ್ನು ಸುರಕ್ಷಿತವಾಗಿರಿಸಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಅವರ ಅತ್ಯುನ್ನತ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದ್ದಾರೆ.

ಸೇನಾ ದಿನದಂದು, ನಾನು ಎಲ್ಲಾ ಸೇನಾ ಸಿಬ್ಬಂದಿ, ಯೋಧರು ಮತ್ತು ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರತಿಯೊಬ್ಬ ಭಾರತೀಯನು ನಮ್ಮ ಸೇನೆಯ ಬಗ್ಗೆ ಹೆಮ್ಮೆಪಡುತ್ತಾನೆ ಮತ್ತು ನಮ್ಮ ಸೈನಿಕರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆಂದು ಹೇಳಿದ್ದಾರೆ.

ಅಂದಹಾಗೆ ಭಾರತೀಯ ಸೇನೆ ಬ್ರಿಟಿಷರ ಆಡಳಿತ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಸ್ಥಾಪನೆಗೊಂಡಿದ್ದು 1895ರ ಜ.1 ಆದರೂ ಸಂಪೂರ್ಣವಾಗಿ ಭಾರತೀಯರ ಅಧಿಕಾರ ವ್ಯಾಪ್ತಿಗೆ ಬಂದದ್ದು, 1949ರ ಜ. 15ರಂದು.