ಬೆಂಗಳೂರು, ಜುಲೈ 16, 2021 (www.justkannada.in): ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಅಭಿಯಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕೂಡ ಸಾಥ್ ನೀಡಿದ್ದಾರೆ.
ನನ್ನ ನೆಚ್ಚಿನ ನಟರಲ್ಲಿ ಒಬ್ಬರಾದ ಶ್ರೀಯುತ ಅನಂತನಾಗ್ ಸರ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ನಮ್ಮೆಲ್ಲರ ಆಸೆ ಎಂದು ಅಪ್ಪು ಹೇಳಿದ್ದಾರೆ.
ನಾನು ಅನಂತ್ ನಾಗ್ ಸರ್ ಅವರ ಅವರ ದೊಡ್ಡ ಅಭಿಮಾನಿ. ಸಿನಿಮಾ ರಂಗಕ್ಕೆ ಅನಂತನಾಗ್ ಸರ್ ಅವರ ಕೊಡುಗೆ ಅಪಾರ ಎಂದು ಪುನೀತ್ ಹೇಳಿದ್ದಾರೆ.
ಅಂದಹಾಗೆ ಅನಂತ್ ನಾಗ್‌ಗೆ ಪದ್ಮಪ್ರಶಸ್ತಿ ನೀಡಿ’ ಅಭಿಯಾನಕ್ಕೆ ರಕ್ಷಿತ್ ಮತ್ತು ರಿಷಬ್ ಶೆಟ್ಟಿ ಮೊದಲಿಗೆ ಅಭಿಯಾನ ಆರಂಭಿಸಿದ್ದರು.
ಇದಕ್ಕೆ ಸಾಕಷ್ಟು ಮಂದಿ ಕೈ ಜೋಡಿಸಿದ್ದು, ಕನ್ನಡದ ಹಿರಿಯ ನಟನಿಗೆ ಪ್ರಶಸ್ತಿ ನೀಡಿದರೆ ಅದಕ್ಕೂ ಮೌಲ್ಯವಿರಲಿದೆ ಎಂದು ಒತ್ತಾಯಿಸಿದ್ದಾರೆ.






