ಸಾನಿಯಾ ಮಿರ್ಜಾ ‘ದುಬೈ ಗೋಲ್ಡನ್ ವೀಸಾ’

ಬೆಂಗಳೂರು, ಜುಲೈ 16, 2021 (www.justkannada.in): ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ  ‘ದುಬೈ ಗೋಲ್ಡನ್‌ ವೀಸಾ’ ಪಡೆದಿರುವ ಮೂರನೇ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಸಾನಿಯಾ ಮಿರ್ಜಾ ಹಾಗೂ ಪತಿ ಪಾಕಿಸ್ತಾನ್ ಕ್ರಿಕೆಟ್‌ ತಂಡದ ಮಾಜಿ ನಾಯಕ ಶೋಯಬ್‌ ಮಲಿಕ್‌ ಅವರಿಗೆ 10 ವರ್ಷಗಳವರೆಗಿನ ಗೋಲ್ಡನ್ ವೀಸಾ ನೀಡಲಾಗಿದೆ.

ಈ ವೀಸಾ ಪಡೆದಿರುವ ಕೆಲವೇ ಕೆಲವು ಭಾರತೀಯರಲ್ಲಿ ನಾನು ಕೂಡ ಒಬ್ಬಳು ಎಂಬುದಕ್ಕೆ ಹೆಮ್ಮೆಯಿದೆ ಎಂದು ಸಾನಿಯಾ ತಿಳಿಸಿದ್ದಾರೆ.

ಗೋಲ್ಡನ್ ವೀಸಾದಿಂದಾಗಿ ದುಬೈನಲ್ಲಿ ಟೆನಿಸ್ ಮತ್ತು ಕ್ರಿಕೆಟ್‌ ಅಕಾಡೆಮಿಗಳನ್ನು ಆರಂಭಿಸುವ ನಮ್ಮ ಯೋಜನೆಯಗೆ ಅವಕಾಶ ಸಿಕ್ಕಂತಾಗಿದೆ’ ಎಂದಿದ್ದಾರೆ ಸಾನಿಯಾ.  ಅಂದಹಾಗೆ ಈ ಹಿಂದೆ ಬಾಲಿವುಡ್‌ ನಟರಾದ ಶಾರೂಖ್‌ ಖಾನ್‌ ಮತ್ತು ಸಂಜಯ್‌ ದತ್‌ ಅವರಿಗೆ ಗೋಲ್ಡನ್ ವೀಸಾ ನೀಡಲಾಗಿತ್ತು.