ಆನ್ ಲೈನ್ ನಲ್ಲಿ ಪೂಜೆ ಪುನಸ್ಕಾರಕ್ಕೆ ಬುಕ್ ಮಾಡುವ ಆ್ಯಪ್ ಬಿಡುಗಡೆ-ಸಚಿವ ರಾಮಲಿಂಗರೆಡ್ಡಿ.

Promotion

ಬೆಂಗಳೂರು, ಸೆಪ್ಟೆಂಬರ್​ 16,2023(www.justkannada.in):   ಆನ್ ಲೈನ್ ​​ನಲ್ಲೆ ಪೂಜೆ ಪುನಸ್ಕಾರಕ್ಕೆ ಬುಕ್ ಮಾಡಿಕೊಳ್ಳುವ ರೀತಿ ಆ್ಯಪ್ ಬಿಡುಗಡೆ ಮಾಡುತ್ತೇವೆ. ಭಕ್ತಾದಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಆನ್ ಲೈನ್ ವ್ಯವಸ್ಥೆ ಮಾಡುತ್ತೇವೆ ಎಂದು ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಮುಜರಾಯಿ ಇಲಾಖೆ ವ್ಯಾಪ್ತಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಎಲ್ಲ ದೇವಾಲಯದ ಆವರಣಗಳನ್ನು ವ್ಯವಸ್ಥಿತವಾಗಿ ಮಾಡಲು ಕ್ರಮ ವಹಿಸಲು ಸೂಚನೆ ಕೊಟ್ಟಿದ್ದೇನೆ. A ಮತ್ತು B ದರ್ಜೆಯ ಎಲ್ಲ ದೇವಸ್ಥಾನಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮೆರಾ ಸಹ ಕಡ್ಡಾಯ ಮಾಡಲು ಹೇಳಿದ್ದೇವೆ ಎಂದು ತಿಳಿಸಿದರು.

ದೇವಸ್ಥಾನದಲ್ಲಿ ಮಹಿಳಾ ಅರ್ಚಕರನ್ನ ನೇಮಕ ಮಾಡುವ ವಿಚಾರ  ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ಯಾರಾದರೂ ಅರ್ಜಿ ಹಾಕಿದರೆ ನೇಮಕ ಮಾಡುತ್ತೇವೆ ಎಂದರು.

ಗೌರಿ ಗಣೇಶ ಹಬ್ಬಕ್ಕೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್ ಗಳಿಂದ ದುಪ್ಪಟ್ಟು ದರ ನಿಗದಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ,  ದುಪ್ಪಟ್ಟು ದರ ನಿಗದಿ ಮಾಡಿರುವುದಕ್ಕೆ ಎರಡೇ ದಿನಕ್ಕೆ 742 ಕೇಸ್ ​ಗಳನ್ನ ಹಾಕಲಾಗಿದೆ. ಖಾಸಗಿ ಬಸ್​​ಗಳ ಮಾಲೀಕರಿಂದ ಕಳೆದ 2 ದಿನಗಳಲ್ಲಿ 92,04,288 ರೂ. ದಂಡ ವಸೂಲಿ ‌ಮಾಡಲಾಗಿದೆ ಎಂದರು.

Key words: app –online- booking -Pooja Punaskara  – Minister -Ramalingareddy.