ಗಮನ ಸೆಳೆದಿದೆ ಅನುಷ್ಕಾ ಶೆಟ್ಟಿ ‘ನಿಶಬ್ಧಂ’ ಟೀಸರ್

Promotion

ಬೆಂಗಳೂರು, ಸೆಪ್ಟೆಂಬರ್ 22, 2020 (www.justkannada.in): ಅನುಷ್ಕಾ ಶೆಟ್ಟಿ ಅಭಿನಯದ ‘ನಿಶಬ್ಧಂ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ.

ಚಿತ್ರದಲ್ಲಿ ಅನುಷ್ಕಾ ಕಿವಿ ಕೇಳದ, ಮಾತು ಬಾರದ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಸಿದ್ಧ ಸಂಗೀತಗಾರ ಆಂಥೋನಿ ಪಾತ್ರದಲ್ಲಿ ಮಾಧವನ್ ನಟಿಸುತ್ತಿದ್ದಾರೆ. ಈ ಚಿತ್ರ ಅಕ್ಟೋಬರ್ 2ರಂದು ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ.

ಅರ್ಜುನ್ ರೆಡ್ಡಿ ಖ್ಯಾತಿಯ ಸಾಲಿನಿ ಪಾಂಡೆ ಈ ಚಿತ್ರದಲ್ಲಿ ಅನುಷ್ಕಾ ಸ್ನೇಹಿತೆಯ ಪಾತ್ರ ಮಾಡಿದ್ದಾರೆ. ಅಂಜಲಿ ಹಾಗು ಹಾಲಿವುಡ್ ನಟ ಮೈಕಲ್ ಮ್ಯಾಡ್ಸೆನ್ ತನಿಖಾಧಿಕಾರಿಗಳಾಗಿ ನಟಿಸಿದ್ದಾರೆ.