ಝೀರೋ ಚಿತ್ರದ ಬಳಿಕ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳದಿರಲು ಅನಿಷ್ಕಾ ಕೊಟ್ಟ ಸ್ಪಷ್ಟನೆಯೇನು?

Promotion

ಮುಂಬೈ:ಮೇ-15:(www.justkannada.in) ಬಾಲಿವುಡ್ ನ ಬಹುಬೇಡಿಕೆ ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಯಾವುದೇ ಚಿತ್ರಗಳನ್ನು ಮಾಡುತ್ತಿಲ್ಲ. ಶಾರೂಕ್ ಖಾನ್ ನಟಿಸಿದ `ಝೀರೋ’ ಚಿತ್ರದ ಬಳಿಕ ಬೇರಾವ ಚಿತ್ರಗಳನ್ನು ಅನುಷ್ಕಾ ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ಸಾಕಷ್ಟು ಊಹಾಪೋಹಗಳು ಆರಂಭವಾಗಿದ್ದವು. ಈಗ ಸ್ವತ: ಅನುಷ್ಕಾ ಶರ್ಮಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಟಿಯಾಗಿ ಏನು ಸಾಧನೆ ಮಾಡಬೇಕಿತ್ತೋ ಆ ಸಾಧನೆಯನ್ನು ನಾನು ಮಾಡಿದ್ದೇನೆ. ವೃತ್ತಿ ಜೀವನದಲ್ಲಿ ನಾನು ಈಗ ಭದ್ರತೆಯ ಸ್ಥಾನ ತಲುಪಿದ್ದೇನೆ. ಸಾಕಷ್ಟು ಬ್ಯುಸಿಯಾಗಿ ಇದ್ದೇನೆ. ಹಾಗಾಗಿ ಯಾವುದೇ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ ಎಂದು ಹೇಳಿದ್ದಾರೆ.

ನಾನು ತುಂಬಾ ಬೇಡಿಕೆ ಇರುವ ಪಾತ್ರಗಳನ್ನು ಮಾಡಿದ್ದೇನೆ. ಒಂದು ವರ್ಷದಲ್ಲಿ ನಾನು ‘ಪರಿ’, ‘ಸೂಯಿ ಧಾಗಾ’ ಹಾಗೂ ‘ಝೀರೋ’ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಮೂರು ಚಿತ್ರಗಳಲ್ಲಿ ಸುಲಭವಾಗಿ ನಟಿಸಲು ಸಾಧ್ಯ ಇರಲಿಲ್ಲ. ಈ ಸಿನಿಮಾಗಳಿಗಾಗಿ ನಾನು ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಅದಲ್ಲದೇ ಈಗ ಡಿಜಿಟಲ್ ವೇದಿಕೆಯಲ್ಲಿ ಯಾವುದಾದರೂ ಶೋ ಮಾಡಬೇಕು ಎಂದುಕೊಂಡಿದ್ದೇನೆ. ಒಂದು ಚಿತ್ರದ ಕೆಲಸ ಕೂಡ ನಡೆಯುತ್ತಿದೆ. ಈ ಕೆಲಸಗಳಿಗಾಗಿ ನನಗೆ ಸಮಯದ ಅವಶ್ಯಕತೆ ಇದೆ. ಇದು ನನಗೆ ತುಂಬಾ ಹೊಸದು ಈ ಎಲ್ಲಾ ಕಾರಣಕ್ಕೆ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದಿದ್ದಾರೆ ಅನುಷ್ಕಾ.

ಝೀರೋ ಚಿತ್ರದ ಬಳಿಕ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳದಿರಲು ಅನಿಷ್ಕಾ ಕೊಟ್ಟ ಸ್ಪಷ್ಟನೆಯೇನು?
anushka sharma,reveals, why she hasnt signed, new film, after zero