ದೇವಸ್ಥಾನದಲ್ಲಿ ಮಹಿಳಾ ಭಕ್ತರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕರಿಗೆ ಬಿತ್ತು ಧರ್ಮದೇಟು….

ಮೈಸೂರು,ಮೇ,15,2019(www.justkannada.in): ದೇವಸ್ಥಾನದಲ್ಲಿ ಮಹಿಳಾ ಭಕ್ತರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕರಿಗೆ ಸಾರ್ವಜನಿಕರು ಧರ್ಮದೇಟು ಕೊಟ್ಟಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೋಕಿನ ಚಿಕ್ಕಮ್ಮ ಚಿಕ್ಕದೇವಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಯುವಕರು ಮಹಿಳಾ ಭಕ್ತರೊಂದಿಗೆ ಅಸಭ್ಯ ವರ್ತನೆ ತೋರಿದ್ದರು. ಯುವಕರ ವರ್ತನೆಗೆ ಕೋಪಗೊಂಡ ಸ್ಥಳೀಯರು ಯುವಕರಿಗೆ ಗೂಸಾ ನೀಡಿದ್ದಾರೆ.

ಯುವಕರು ಬೆಂಗಳೂರು ಮೂಲದವರೆನ್ನಲಾಗುತ್ತಿದ್ದು,  ವ್ಯಕ್ತಿಯ ಕಾರು ಜಖಂಗೊಳಿಸಿ ಸ್ಥಳೀಯರು  ಥಳಿಸಿದ್ದಾರೆ. ಇನ್ನು ಪೊಲೀಸರ ಆಗಮನವಾಗುತ್ತಿದ್ದಂತೆ ಅಸಭ್ಯ ವರ್ತನೆ ತೋರಿದ್ದ ಬೆಂಗಳೂರು ಮೂಲದ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇನ್ನು  ದೇವಸ್ಥಾನದ ವ್ಯಾಪ್ತಿಯಲ್ಲಿ ಮದ್ಯ ನಿಷೇದಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: Indecent- behavior –women- devotees –temple-young men- Assault