ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಇರುವೆಗಳ ಕಾಟ: ಬಾಣಂತಿಯರು ಹೈರಾಣ…

Promotion

ಗದಗ,ಜೂ,30,2019(www.justkannada.in):  ಗದಗದಲ್ಲಿರುವ ಜಿಮ್ಸ್ ಆಸ್ಪತ್ರೆಯಲ್ಲಿ ಇರುವೆಗಳ ಕಾಟದಿಂದ ಬಾಣಂತಿಯರು ಹೈರಾಣಾಗಿದ್ದು ಆಸ್ಪತ್ರೆ ಸಿಬ್ಬಂದಿ ವಿರುದ್ದ ಬಾಣಂತಿಯರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಮ್ಸ್ ಆಸ್ಪತ್ರೆಯ ಬಾಣಂತಿಯರ ವಾರ್ಡ್ ನ ತುಂಬೆಲ್ಲಾ ಇರುವೆಗಳ ಕಾಟ ಹೆಚ್ಚಾಗಿದ್ದು ಇರುವೆಗಳ ಕಾಟದಿಂದ  ಮಕ್ಕಳು ಸರಿಯಾಗಿ ನಿದ್ದೆ ಮಾಡದೇ ರಾತ್ರಿಯಿಡಿ ಅಳುತ್ತಿವೆ. ಇದರಿಂದ ಬಾಣಂತಿಯರು ಹೈರಾಣಾಗಿದ್ದು ಇರುವೆಗಳನ್ನ ಸ್ವಚ್ಛಗೊಳಿಸುವಂತೆ ಹೇಳಿದರೂ ಸಿಬ್ಬಂದಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆಸ್ಪತ್ರೆ ವಿರುದ್ದ ಕಿಡಿಕಾರಿದ್ದಾರೆ.

ಇನ್ನಾದರೂ  ಆಸ್ಪತ್ರೆಯ ಸಿಬ್ಬಂದಿಗಳು ಇತ್ತಗಮನ ಹರಿಸಿ ಇರುವೆಗಳೇ ತುಂಬಿರುವ ವಾರ್ಡ್ ಗಳನ್ನ ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

Key words: ants – Gadag-Gims Hospital