ಕನ್ನಡ ವಿರೋಧಿ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು : ಸೈಯದ್ ಇಸಾಕ್

Promotion

ಮೈಸೂರು,ಏಪ್ರಿಲ್,10,2021(www.justkannada.in) :  ಇದೇ ಜಾಗದಲ್ಲಿ ನಾನು ಮತ್ತೆ ಕನ್ನಡದ ಗ್ರಂಥಾಲಯ ಕಟ್ಟೆ ಕಟ್ಟುತ್ತೇನೆ. ಕನ್ನಡ ವಿರೋಧಿ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕನ್ನಡ ಗ್ರಂಥಾಲಯ ನಿರ್ಮಿಸಿದ್ದ ಸೈಯದ್ ಇಸಾಕ್ ಆಕ್ರೋಶವ್ಯಕ್ತಪಡಿಸಿದ್ದಾರೆ.Anti-Kannada-bastards-right-Must-punished-Syed Isaac

ಕನ್ನಡ ವಿರೋಧಿಗಳ ಕೆಲಸ ಇದು. 2011ರಲ್ಲಿ ನಾನು ಈ ಗ್ರಂಥಾಲಯ ಸ್ಥಾಪಿಸಿದ್ದೆ. ದಿನಕ್ಕ 150 ಕ್ಕೂ ಹೆಚ್ಚು ಜನ ಓದುಗರು ಬರುತ್ತಿದ್ದರು. ಕನ್ನಡ ಗ್ರಂಥಾಲಯ ನಡೆಸಬಾರದು ಅಂತ ಕೆಲವು ಕರೆಗಳು ಬರುತ್ತಿದ್ದವು. ನಾನು ಯಾವುದಕ್ಕೂ ಹೆದರಿರಲಿಲ್ಲ ಎಂದಿದ್ದಾರೆ.Anti-Kannada-bastards-right-Must-punished-Syed Isaac

ಕುರಾನ್, ಬೈಬಲ್, ಭಗವದ್ಗೀತೆ ಎಲ್ಲವೂ ಕನ್ನಡದಲ್ಲೆ ಇದ್ದವು. ಈಗ ಎಲ್ಲಾ ಭಸ್ಮವಾಗಿವೆ. ಕನ್ನಡ ವಿರೋಧಿ ಯಾರೆ ಇದ್ದರು, ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

key words : Anti-Kannada-bastards-right-Must-punished-Syed Isaac