ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಅಗರಬತ್ತಿ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ.

Promotion

ಬೆಂಗಳೂರು,ಅಕ್ಟೋಬರ್,14,2023(www.justkannada.in):  ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿ 16 ಮಂದಿ ಸಾವಿಗೀಡಾದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅಗ್ನಿಅವಘಡ ಸಂಭವಿಸಿದೆ.

ನಗರದ ಪೈಪ್ ಲೈನ್ ರಸ್ತೆಯ ಜೋಳರಪಾಳ್ಯದಲ್ಲಿ ಅಗರಬತ್ತಿ ಕಾರ್ಖಾನೆಯಲ್ಲಿ ಅಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದ್ದು ರಸ್ತೆವರೆಗೂ ಬೆಂಕಿ ಆವರಿಸಿತ್ತು. ದೊಡ್ಡಪ್ರಮಾಣದ  ಬೆಂಕಿಯಿಂದ ಜನರಲ್ಲಿ ಆತಂಕ ಶುರುವಾಗಿದ್ದು ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ವಾಹನ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದವು.

ಇನ್ನು ಬೆಂಕಿ ಕೆನ್ನಾಲಿಗೆ 7 ಬೈಕ್ ಗಳು ಸುಟ್ಟು ಕರಕಲಾಗಿವೆ ಎಂದು ಹೇಳಲಾಗುತ್ತಿದೆ. ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿ 16 ಮಂದಿ ಸಾವನ್ನಪ್ಪಿದ್ದು ಈ ಬೆನ್ನಲ್ಲೆ ಸರ್ಕಾರ  ಸಭೆ ಸಮಾರಂಭ ಹಬ್ಬಗಳಲ್ಲಿ ಪಟಾಕಿ ಬಳಕೆ ನಿಷೇಧಿಸಿದೆ.

Key words: Another -fire accident- Bangalore-agarbatti factory.