ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ವಾರ್ಷಿಕ ಪ್ರಶಸ್ತಿ ಪ್ರಕಟ.

ಮೈಸೂರು,ಜುಲೈ,19,2022(www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2021-22ನೇ ಸಾಲಿನ ಪತ್ರಿಕಾ ದಿನಾಚರಣೆ ಅಂಗವಾಗಿ ಸಂಘದ ವತಿಯಿಂದ ಕೊಡ ಮಾಡುವ ವಾರ್ಷಿಕ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಅತ್ಯುತ್ತಮ ವರದಿ, ಛಾಯಾಚಿತ್ರ ಮತ್ತು ಅತ್ಯುತ್ತಮ ವಿದ್ಯುನ್ಮಾನ ವರದಿಗಳ ವಾರ್ಷಿಕ ಪ್ರಶಸ್ತಿಗೆ ಕೆಳಕಂಡ ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದ “ಮೈಸೂರು ಗಾಂಧಿಗಿಲ್ಲ ಸ್ಮಾರಕ” ಲೇಖನಕ್ಕೆ ವರದಿಗಾರ ರವಿಚಂದ್ರ ಹಂಚ್ಯಾ ಅವರಿಗೆ ವರ್ಷದ ಅತ್ಯುತ್ತಮ ಕನ್ನಡ ವರದಿ ಪ್ರಶಸ್ತಿ ಲಭಿಸಿದೆ. ನಂಜನಗೂಡು ತಾಲೂಕು ವಿಜಯವಾಣಿ ಪತ್ರಿಕೆಯ ವರದಿಗಾರ ಪ್ರತಾಪ್ ಟಿ ಕೋಡಿನರಸೀಪುರ ಅವರ “ಪಕ್ಷಿಗಳಿಗೆ ಮೀನು ಬಲೆ ಉರುಳು” ಲೇಖನಕ್ಕೆ ವರ್ಷದ ಗ್ರಾಮಾಂತರ ವಿಭಾಗದ ಅತ್ಯುತ್ತಮ ಕನ್ನಡ ವರದಿ ಪ್ರಶಸ್ತಿ ಲಭಿಸಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ ಪ್ರೆಸ್ ಪತ್ರಿಕೆಯ ವರದಿಗಾರ ಕಾರ್ತಿಕ್ ಕೆ.ಕೆ ಅವರ “A VISION TO GUIDE THE CHALLENGED”ಲೇಖನಕ್ಕೆ ವರ್ಷದ ಅತ್ಯುತ್ತಮ ಇಂಗ್ಲಿಷ್ ವರದಿ ಪ್ರಶಸ್ತಿ ಲಭಿಸಿದೆ. ಮೈಸೂರು ಮಿತ್ರ/ಸ್ಟಾರ್ ಆಫ್ ಮೈಸೂರು ಛಾಯಾಗ್ರಾಹಕ ಎಂ.ಎನ್ ಲಕ್ಷ್ಮೀ ನಾರಾಯಣ್‌ ಯಾದವ್ ಅವರ “ಮಳೆಯಿಂದ ಹಳೆಯ ಮನೆ ಕುಸಿತ ಸಿಲುಕಿದ್ದ ವೃದ್ಧನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸುತ್ತಿರುವ” ಚಿತ್ರಕ್ಕೆ ವರ್ಷದ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿ ಲಭಿಸಿದೆ.

ದೂರದರ್ಶನ ವರದಿಗಾರ ಜಿ.ಜಯಂತ್ ಹಾಗೂ ಕ್ಯಾಮೆರಾಮನ್ ರಾಮು ಅವರ “ಪ್ರಾಣಿ ಪಕ್ಷಿಗಳ ದಾಹ ತೀರಿಸಲು ಕೆರೆ ಮೀಸಲು” ವಿಶೇಷ ವರದಿಗೆ ಅತ್ಯುತ್ತಮ ವಿದ್ಯುನ್ಮಾನ ವರದಿ ಪ್ರಶಸ್ತಿ ಲಭಿಸಿದೆ. ದೂರದರ್ಶನ ವರದಿಗಾರ ರಾಘವೇಂದ್ರ ಸ್ವಾಮಿ ಎಂ.ಸಿ ಅವರ “ಹಗ್ಗದ ದಾರದ ಛಾವಣಿಯ ಆವಿಷ್ಕಾರ” ವಿಶೇಷ ವರದಿಗೆ ಅತ್ಯುತ್ತಮ ವಿದ್ಯುನ್ಮಾನ ವರದಿ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪ್ರದಾನ: ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಜುಲೈ ಅಂತ್ಯದಲ್ಲಿ ಆಯೋಜಿಸುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸಾಧಕ ಪತ್ರಕರ್ತರನ್ನು ಗೌರವಿಸಲಾಗುವುದು ಎಂದು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Key words: Annual award -announced – Mysore- District –Journalists- Association.