Monday, September 14, 2026

BDA Apartments

ವಿವಿಧ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ ಟಿಯಿಂದ ವಿನಾಯಿತಿ ನೀಡಿದ ಕೇಂದ್ರ ಸರ್...
Home Front Page ವಿವಿಧ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ ಟಿಯಿಂದ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ

ವಿವಿಧ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ ಟಿಯಿಂದ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ, ಜುಲೈ 19, 2022 (www.justkannada.in): ಕೇಂದ್ರ ಹಣಕಾಸು ಸಚಿವಾಲಯವು ಮಂಗಳವಾರದಂದು, ಬಿಡಿಯಾಗಿ ಮಾರಾಟ ಮಾಡುವ ಹಾಗೂ ಪೂರ್ವಪ್ಯಾಕ್ ಮಾಡಿರದ ಅಥವಾ ಮುಂಚಿತವಾಗಿ ಲೇಬಲ್ ಮಾಡಿರದಂತಹ ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ ಟಿಯನ್ನು ತೆಗೆದುಹಾಕಿದೆ.

ಸರಣಿ ಟ್ವೀಟ್‌ ಗಳ ಮೂಲಕ ಹಣಕಾಸು ಸಚಿವಾಲಯವು ನಾನ್-ಬ್ರ್ಯಾಂಡೆಡ್/ ಲೇಬೆಲ್ಡ್ ಬೇಳೆಗಳು, ಹಿಟ್ಟುಗಳು ಹಾಗೂ ಮೊಸರು/ಲಸ್ಸಿಗೆ ಜಿಎಸ್‌ ಟಿ ವಿನಾಯಿತಿ ನೀಡಿರುವುದಾಗಿ ತಿಳಿಸಿದೆ. ಈ ಪಟ್ಟಿಯಲ್ಲಿ ಓಟ್ಸ್, ಗೋಧಿ, ಗೋಧಿನುಚ್ಚು ಹಾಗೂ ಜೋಳ ಇವುಗಳೂ ಸೇರಿವೆ.ವಿವಿಧ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ ಟಿಯಿಂದ ವಿನಾಯಿತಿ ನೀಡಿದ ಕೇಂದ್ರ ಸರ್...

“ಇದು ಜಿಎಸ್‌ಟಿ ಕೌನ್ಸಿಲ್‌ ನಲ್ಲಿ ತೆಗೆದುಕೊಂಡಂತಹ ಅವಿರೋಧ ನಿರ್ಣಯವಾಗಿದೆ. ಜೂನ್ ೨೮, ೨೦೨೨ರಂದು ಚಂಡೀಘಡದಲ್ಲಿ ನಡೆದಂತಹ ೪೭ನೇ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುವಾಗ ದರ ಕ್ರಮಬದ್ಧಗೊಳಿಸುವಿಕೆಯ ಎಲ್ಲಾ ರಾಜ್ಯಗಳ ಸಚಿವರ ಗುಂಪು ಹಾಜರಿತ್ತು,” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

Key words: Central Government –exempted- essential items – GST