ಮಹಾರಾಷ್ಟ್ರದಿಂದ ಗಡಿ ಗ್ರಾಮಗಳಿಗೆ ಯೋಜನೆ ಘೋಷಣೆ:  ಇಷ್ಟಾದ್ರೂ ಸಿಎಂಗೆ ಜವಾಬ್ದಾರಿ ಇಲ್ಲವಾ…? ಸಿದ್ಧರಾಮಯ್ಯ ತರಾಟೆ.

Promotion

ಬೆಳಗಾವಿ,ಮಾರ್ಚ್,16,2023(www.justkannada.in): ಮಹಾರಾಷ್ಟ್ರದಿಂದ ಬೆಳಗಾವಿ ಗಡಿ ಗ್ರಾಮಗಳಿಗೆ ಷಡ್ಯಂತ್ರದಿಂದ ಯೋಜನೆ ಘೋಷಣೆ ಮಾಡಿದ್ದಾರೆ  ಇಷ್ಟಾದ್ರೂ ಸಿಎಂಗೆ ಜವಾಬ್ದಾರಿ ಇಲ್ಲವಾ…?  ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತರಾಟೆ ತೆಗೆದುಕೊಂಡರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಕೇಂದ್ರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಸ್ವತಂತ್ರ ರಾಜ್ಯವನ್ನ ಒಪ್ಪಿಕೊಂಡಿದ್ದೇವೆ. ಇದರ ಗಾಂಭೀರ್ಯತೆ ಸಿಎಂ ಬೊಮ್ಮಾಯಿ ತಿಳಿದುಕೊಳ್ಳಬೇಕು.  ಸಿಎಂ ಆದವರು ಈ ರಾಜ್ಯದ ನೆಲೆ, ಜಲ,ಭಾಷೆ ಗೌರವ ಕಾಪಾಡಬೇಕು.  ಮಹಾರಾಷ್ಟ್ರದವರು ಷಡ್ಯಂತ್ರದಿಂದ ಯೋಜನೆ ಘೋಷಿಸಿದ್ದಾರೆ. ಮಹಾರಾಷ್ಟ್ರದವರು ಅನಗತ್ಯವಾಗಿ ಕಾಲು ಕೆರೆಯುತ್ತಿದ್ದಾರೆ. ಇದು ಒಕ್ಕೂಟದ ವ್ಯವಸ್ಥೆಗೆ ಧಕ್ಕೆ.  ಕನ್ನಡಿಗರಿಗೆ ಅನ್ಯಾಯ..?  ಕೇಂದ್ರದ ಮೇಲೆ ಒತ್ತಡ ಹೇರಲು ಆಗದಿದ್ದರೇ ಸಿಎಂ ಆಗಿರಲು ನಾಲಾಯಕ್ ಎಂದು ಗುಡುಗಿದರು.

ಮಾರ್ಚ್ 20 ರಂದು ಬೆಳಗಾವಿಯಲ್ಲಿ ಯುವಕಾಂಗ್ರೆಸ್ ಸಮಾವೇಶ ನಡೆಸುತ್ತೇವೆ. ಯುವಕರನ್ನುದ್ದೇಶೀಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಐತಿಹಾಸಿಕ ರ್ಯಾಲಿ ಮಾಡಲು ಇಂದು ಸಭೆಯಲ್ಲಿ ತೀರ್ಮಾನಿಸಿದ್ದೇವೆ. 4ರಿಂದ 5 ಲಕ್ಷ ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಚುನಾವಭೆ  ಹಿನ್ನೆಲೆ ಯುವ ಕಾಂಗ್ರೆಸ್ ಸಮಾವೇಶ ಆಯೋಜಿಸಿದ್ದೇವೆ ಚುನಾವಣೆಗೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ ಎಂದು ತಿಳಿಸಿದರು.

Key words:  Announcement – project – Maharashtra – border villages-Siddaramaiah –outrage