ಪ್ರಾಣಿ ಬಲಿ ಕೊಡುವಾಗ ಯಡವಟ್ಟು: ಮೇಕೆ ಬದಲಿಗೆ ಯುವಕನ ಕತ್ತು ಕತ್ತರಿಸಿದ ಪಾನಮತ್ತ ಸ್ನೇಹಿತ.

Promotion

ಆಂದ್ರಪ್ರದೇಶ,ಜನವರಿ,19,2022(www.justkannada.in): ದೇವರಿಗೆ ಪ್ರಾಣಿಯನ್ನು ಬಲಿ ಕೊಡುವ ವೇಳೆ  ಮೇಕೆ ಕಡಿಯುವ ಬದಲು ಮೇಕೆ ಹಿಡಿದು ನಿಂತಿದ್ಧ ಯುವಕನ ಕತ್ತು ಕತ್ತರಿಸಿರುವ ಘಟನೆ ಆಂದ್ರ ಪ್ರದೇಶದಲ್ಲಿ ನಡೆದಿದೆ.

ಅಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ವಲಸನಪಲ್ಲಿಯಲ್ಲಿ ಈ ಘಟನೆ ನಡೆದಿದೆ.  ಸುರೇಶ್ (32) ಬಲಿಪಶುವಾದ ಯುವಕ. ತನ್ನ ಸ್ನೇಹಿತ ಚಲಪತಿಯೇ ಕುಡಿದ ಮತ್ತಿನಲ್ಲಿ ಮೇಕೆ ಬದಲಿಗೆ ತಲೆ ಕತ್ತರಿಸಿದವ‌. ಪ್ರತಿ ವರ್ಷದಂತೆ ಈ ವರ್ಷವೂ ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ ಬಲಿ ಕೊಡುವುದು ಗ್ರಾಮದ ಸಂಪ್ರದಾಯ. ಅದರಂತೆ ಮೇಕೆ ಕತ್ತರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

ಚಲಪತಿ ಕುಡಿದ ಮತ್ತಿನಲ್ಲಿ ಮೇಕೆ ಕಡಿಯುವ ಬದಲು ಮೇಕೆ ಹಿಡಿದುಕೊಂಡಿದ್ದ ಸುರೇಶ್ ಕತ್ತು ಕತ್ತರಿಸಿದ್ದಾನೆ. ಮದನಪಲ್ಲಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಅರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ನಾಟಕ ಆಂದ್ರದ ಗಡಿಬಾಗದಲ್ಲಿರುವ  ಮದನಪಲ್ಲಿ ಕೋಲಾರ ಜಿಲ್ಲೆಯಿಂದ ಕೇವಲ 10 ಕಿ.ಮೀ ದೂರದಲ್ಲಿದೆ.

Key words: animal-drunken -friend -cut -young man- goat.