ಅಮುಲ್ ಮತ್ತು ಮದರ್ ಡೈರಿ ಹಾಲಿನ ದರ 2 ರೂ. ಹೆಚ್ಚಳ.

Promotion

ಬೆಂಗಳೂರು,ಆಗಸ್ಟ್,16,2022(www.justkannada.in):  ಅಮುಲ್ ಮತ್ತು ಮದರ್ ಡೈರಿ ಹಾಲಿನ ದರವನ್ನು 2 ರೂ. ಹೆಚ್ಚಳ ಮಾಡಲಾಗಿದೆ.

ಅಮುಲ್ ಗೋಲ್ಡ್ ಬೆಲೆ 500 ಎಂಎಲ್​ಗೆ  31 ರೂ., ಅಮುಲ್ ತಾಜಾ 500 ಎಂಎಲ್​ ಗೆ 25 ರೂ., ಅಮುಲ್ ಶಕ್ತಿ 500 ಎಂಎಲ್​ ಗೆ 28 ​​ರೂ. ಪ್ರತಿ ಲೀಟರ್‌ಗೆ ರೂ 2 ಹೆಚ್ಚಳವಾಗಿದ್ದು, ಎಂಆರ್‌ಪಿಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿದೆ.

ಅಮುಲ್ ಈ ವರ್ಷದ ಫೆಬ್ರವರಿಯಲ್ಲಿ ಬೆಲೆಗಳನ್ನು ಹೆಚ್ಚಿಸಿತ್ತು. ಇದಾದ ನಂತರ ಅಮುಲ್ ಗೋಲ್ಡ್ ಹಾಲಿನ 500 ಎಂಎಲ್ ​ಗೆ 30 ರೂ., ಅಮುಲ್ ತಜಾ 500 ಎಂಎಲ್ ಗೆ 24 ರೂ., ಅಮುಲ್ ಶಕ್ತಿ 500 ಎಂಎಲ್ ಗೆ 27 ರೂ. ದರವನ್ನು ನಿಗದಿ ಮಾಡಲಾಗಿತ್ತು. ಆಗಸ್ಟ್ 17, 2022 ರಿಂದ ಜಾರಿಗೆ ಬರುವಂತೆ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸುವುದು ಅನಿವಾರ್ಯ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Key words: Amul -Mother Dairy -milk -price -Rs.2. -increase

ENGLISH SUMMARY…

Prices of Amul and Mother Dairy milk increased by Rs. 2 per liter
Bengaluru, August 16, 2022 (www.justkannada.in): The prices of Amul and Mother Dairy milk has been increased by Rs. 2 per liter.
The price of 500 ml Amul Gold milk is Rs.31 and Amul Fresh 500 ml packet is Rs. 25. and the price of 500 ml Amul Shakti is Rs. 28 per liter. A sum of Rs. 2 has been increased per liter, which means 4% increase on MRP.
According to an official of Amul, increasing the price by Rs. 2 has become inevitable and will be applicable from August 17, 2022.
Keywords: Amul/ Milk/ price hike