Saturday, September 19, 2026

BDA Apartments

Home Front Page ಈ ಸರ್ಕಾರ ಜೀವಂತವಾಗಿದೆಯಾ..?  ಈ ಸರ್ಕಾರ ಕಿತ್ತು ಹಾಕಲು ಜನ ಕಾಯುತ್ತಿದ್ದಾರೆ-  ಮಾಜಿ ಸಿಎಂ ಸಿದ್ಧರಾಮಯ್ಯ.

ಈ ಸರ್ಕಾರ ಜೀವಂತವಾಗಿದೆಯಾ..?  ಈ ಸರ್ಕಾರ ಕಿತ್ತು ಹಾಕಲು ಜನ ಕಾಯುತ್ತಿದ್ದಾರೆ-  ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಆಗಸ್ಟ್,16,2022(www.justkannada.in):  ಜೆಸಿ ಮಾಧುಸ್ವಾಮಿ ಸರ್ಕಾರ ನಡೆಯುತ್ತಿಲ್ಲ ಎಂದಿದ್ದಾರೆ.  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.  ಎಸ್ ಟಿ ಸೋಮಶೇಖರ್, ಮುನಿರತ್ನ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜೀವಂತವಾಗಿದೆಯಾ..?  ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿದ‍್ಧರಾಮಯ್ಯ,  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವತ್ತು ಇಷ್ಟು ಹದಗೆಟ್ಟಿರಲಿಲ್ಲ. ಕರ್ನಾಕಟದ ಇತಿಹಾಸದಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆದಿತ್ತಾ..?   ರಾಜ್ಯದ ಜನರು ಚುನಾವಣೆ ಬರುವುದನ್ನೇ ಕಾಯುತ್ತಿದ್ದಾರೆ. ಈ ಸರ್ಕಾರವನ್ನ ಕಿತ್ತು ಹಾಕದಿದ್ದರೆ ಉಳಿಗಾಲವಿಲ್ಲ ಎಂದು ಕಿಡಿಕಾರಿದರು.

ಸಿದ‍್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂಬ ಸಚಿವ ಶ್ರೀರಾಮುಲು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನಾನು ಶ್ರೀರಾಮುಲು ಬಗ್ಗೆ ಮಾತನಾಡಲು ಹೋಗಲ್ಲ.

ಶ್ರೀರಾಮುಲುರನ್ನ ಡಿಸಿಎಂ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಶ್ರೀರಾಮುಲುರನ್ನ ಡಿಸಿಎಂ ಮಾಡಿಲ್ಲ. ಹಾಗಾಗಿ ಶ್ರೀರಾಮುಲುಗೆ ಭ್ರಮನಿರಸನವಾಗಿದೆ ಎಂದು ಹೇಳಿದರು.

Key words:  government – People – waiting – Former CM -Siddaramaiah.