ನ.28 ರಂದು ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿ.ನ ಅಮೃತ ಮಹೋತ್ಸವ ಆಚರಣೆ.

Promotion

ಮೈಸೂರು,ನವೆಂಬರ್,26,2022(www.justkannada.in): ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿ. ಪ್ರಸಕ್ತ ವರ್ಷಕ್ಕೆ 75 ವರ್ಷಗಳನ್ನ ಪೂರೈಸಿದ್ದು, ನವೆಂಬರ್ 28 ರಂದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಮೈಲಾಕ್ ಅಧ್ಯಕ್ಷ ರಘು ಕೌಟಿಲ್ಯ, 1937ರಲ್ಲಿ ರಾಜಶ್ರೀ ನಾಲ್ವಾಡಿ ಕೃಷ್ಣರಾಜ ಒಡೆಯರ್  ರಿಂದ  ಸಂಸ್ಥೆ ಸ್ಥಾಪಿತಗೊಂಡಿದ್ದು, ಇದೀಗ ಅಮೃತ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿದೆ.

ನವೆಂಬರ್  28ರಂದು ನಗರದ ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಎಸ್ ಟಿ ಸೋಮಶೇಖರ್, ಮುರುಗೇಶ್ ನಿರಾಣಿ ಹಾಗೂ ಎಸ್ ನಾಗರಾಜ್, ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಭಾಗಿಯಾಗಿಲಿದ್ದಾರೆ. ಇದೇ ವೇಳೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ ಪ್ರಮುಖರಿಗೆ, ನಿವೃತ್ತ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

Key words: Amrita Mahotsava- celebration – Mysore Paints and Varnish Ltd-Nov. 28.