ಬಿಜೆಪಿಯದ್ದು ಒಂದು ದೇಶ, ಒಂದು ಭಾಷೆ. ಒಬ್ಬನಾಯಕ ಸಿದ್ಧಾಂತ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ.

ಬೆಂಗಳೂರು,ನವೆಂಬರ್,26,2022(www.justkannada.in): ಬಿಜೆಪಿಯದ್ದು ಒಂದು ದೇಶ, ಒಂದು ಭಾಷೆ. ಒಬ್ಬನಾಯಕ ಸಿದ್ಧಾಂತ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಮಾಡಿದ್ದು ನಾವು.  ಬಿಜೆಪಿಯವರು ಮೀಸಲಾತಿ ವಿರೋಧ ಮಾಡಿದವರು.  ಸಿಎಂ ಬೊಮ್ಮಾಯಿ  ಧಮ್, ತಾಕತ್ ಎಂದು ಭಾಷಣ ಮಾಡುತ್ತಾರಲ್ಲ ಮೀಸಲಾತಿ ಕೊಟ್ಟಾಗ ವಿರೋಧ ಮಾಡಿದ್ಯಾರು..?  ಎಂದು ಪ್ರಶ್ನಿಸಿದರು.

ದಲಿತರು ಹಿಂದುಳಿದವರಿಗೆ ಬಿಜೆಪಿಯವರು ಏನು ಮಾಡಿದ್ದಾರೆ.  ಒಬಿಸಿಗೆ ಮೀಸಲಾತಿ ಕೊಟ್ಟಾಗ ರಾಮಜೋಯಿಸ್ ವಿರೋಧಿಸಿದ್ದರು ಆಗ ಬಿಎಸ್ ವೈ, ನಳೀನ್ ಕುಮಾರ್ ಕಟೀಲು ಎಲ್ಲಿದ್ದರು…? ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: BJP – one country- one language-One leader- theory- Former CM- Siddaramaiah