ಕನ್ನಡದ ಅಣ್ಣವ್ರನ್ನು ನೆನೆದ ಬಾಲಿವುಡ್ ಬಿಗ್ ಬಿ

Promotion

ಬೆಂಗಳೂರು, ಜನವರಿ 25, 2019 (www.justkannada.in): ಬಿಗ್ ಬಿ ಈ ಸ್ಟಾರ್ ನಟರ ತಂದೆಯನ್ನು ಸ್ಮರಿಸಿಕೊಂಡು ಅವರ ಜತೆ ಕೆಲಸ ಮಾಡಿದ್ದೇ ನನಗೆ ಗೌರವ ಎಂದಿದ್ದಾರೆ.

ಅಕ್ಕಿನೇನಿ ನಾಗೇಶ್ವರ ರಾವ್ ಪುತ್ರ ನಾಗಾರ್ಜುನ, ಡಾ. ರಾಜ್ ಕುಮಾರ್ ಪುತ್ರ ಶಿವರಾಜ್ ಕುಮಾರ್, ಶಿವಾಜಿ ಗಣೇಶನ್ ಪುತ್ರ ಪ್ರಭು ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಗೌರವ ಎಂದು ಬಿಗ್ ಬಿ ಬ್ಲಾಗ್ ನಲ್ಲೂ ಬರೆದುಕೊಂಡಿದ್ದಾರೆ.

ಅಂದಹಾಗೆ ಇದಕ್ಕೆ ಕಾರಣವಾಗಿದ್ದು ಜಾಹೀರಾತ ಒಂದರ ಚಿತ್ರೀಕರಣದಲ್ಲಿ. ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ದಕ್ಷಿಣ ಭಾರತದ ಸ್ಟಾರ್ ನಟರ ಜತೆಗೆ ಒಂದು ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಬಿಗ್ ಬಿ ತಮ್ಮ ಬ್ಲಾಗ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ವಿಶೇಷವೆಂದರೆ ಈ ಜಾಹೀರಾತು ಚಿತ್ರೀಕರಣದಲ್ಲಿ ತೆಲುಗು ನಟ ನಾಗಾರ್ಜುನ, ತಮಿಳು ನಟ ಪ್ರಭು ಮತ್ತು ಕನ್ನಡ ನಟ ಶಿವರಾಜ್ ಕುಮಾರ್ ಕೂಡಾ ಪಾಲ್ಗೊಂಡಿದ್ದಾರೆ.