ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಅಂಬಾಟಿ ರಾಯುಡು….

Promotion

ಮುಂಬೈ,ಜು,3,2019(www.justkannada.in):  ವಿಶ್ವಕಪ್ ನಲ್ಲಿ ಸ್ಥಾನ ಗಳಿಸುವಲ್ಲಿ ವಿಫಲರಾಗಿದ್ದ ಭಾರತ ತಂಡದ ಕ್ರಿಕೆಟ್  ಆಟಗಾರ ಅಂಬಾಟಿ ರಾಯುಡು  ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.

ಇಂಗ್ಲೇಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಭಾರತ ತಂಡದಿಂದ ಸ್ಥಾನ ಸಿಗದಿದ್ದಕ್ಕೆ ಅಂಬಾಟಿ ರಾಯುಡು ಬೇಸರಗೊಂಡಿದ್ದರು. ಈ ಹಿನ್ನೆಲೆ ಇಂದು ಎಲ್ಲಾ ಮಾದರಿಯ ಕ್ರಿಕೆಟ್ ಗೆ ಅಂಬಟಿ ರಾಯಡು ವಿದಾಯ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

2013ರಲ್ಲಿ ಜಿಬಾಂಬ್ವೆ ವಿರುದ್ದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಅಂಬಾಟಿ ರಾಯುಡು  ಪಾದಾರ್ಪಣೆ ಮಾಡಿದ್ದರು. ಈ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ರಾಯುಡು ಸಾಕಷ್ಟು ಹೆಸರು ಗಳಿಸಿದ್ದರು. ಇತ್ತೀಚೆಗೆ ಅಂಬಾಟಿ ರಾಯುಡು ಅವರಿಂದ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ಅವರನ್ನ ವಿಶ್ವಕಪ್ ನಲ್ಲಿ ಅವಕಾಶ ಸಿಕ್ಕಿರಲಿಲ್ಲ.

key words: ambati rayudu- Goodbye – international- cricket.