ಡಿಕೆಶಿ ಜೈಲಿಗೆ ಹೋಗಿದ್ದಕ್ಕೆ ಖುಷಿ ಪಡಲ್ಲ: ರೇಣುಕಾಚಾರ್ಯ

Promotion

ಬೆಂಗಳೂರು, ಸೆಪ್ಟೆಂಬರ್ 08, 2019 (www.justkannada.in): ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಮಾಡ್ಲಿಲ್ಲ. ಲೂಟಿ ಮಾಡಲಿಲ್ಲ. ರಾಜಕೀಯ ಷಡ್ಯಂತ್ರದಿಂದ ಜೈಲಿಗೆ ಹೋದ್ರು. ಕೇಂದ್ರದ ಮಾಜಿ ಗೃಹ ಸಚಿವ ಚಿದಂಬರಂ ಜೈಲಿಗೆ ಹೋಗಿದ್ದಾರೆ.

ಡಿಕೆ ಶಿವಕುಮಾರ್ ನನಗೆ ಸ್ನೇಹಿತರು, ಅವರು ಜೈಲಿಗೆ ಹೋದರು ಅಂತಾ ನಾನು ಖುಷಿ ಪಡಲ್ಲ ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ ವೇಳೆ ಜನರ ಆಸ್ತಿಪಾಸ್ತಿಗೆ ದಕ್ಕೆ ತಂದಿದ್ದೀರಿ ಅಂತ ಕಾಂಗ್ರೆಸ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದರು.

ಬಿಜೆಪಿಯವರು ಯಡಿಯೂರಪ್ಪ ಜೈಲಿಗೆ ಹೋದಾಗ ಯಾವುದೇ ಗಲಾಟೆ ಮಾಡಲಿಲ್ಲ. ಕಾಂಗ್ರೆಸ್ – ಜೆಡಿಎಸ್ ಪಕ್ಷದ ಶಾಸಕರು ಸ್ವಯಂ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದರೆ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ರೇಣುಕಾಚಾರ್ಯ ಜ್ಯಾತ್ಯಾತೀತ ವ್ಯಕ್ತಿ, ನಾನು ಯಾವುದೇ ಉಸ್ತುವಾರಿ ಬಯಸಲ್ಲ ಎಂದು ಹೇಳಿದರು.