‘ವಿಶ್ವಾಸಂ’ ರಿಮೇಕ್ ನಲ್ಲಿ ಶಿವಣ್ಣ ನಟಿಸುತ್ತಿಲ್ಲ !

Promotion

ಬೆಂಗಳೂರು, ಮೇ 22, 2019 (www.justkannada.in): ತಮಿಳಿನ ಸೂಪರ್ ಹಿಟ್ ಚಿತ್ರ ‘ವಿಶ್ವಾಸಂ’ ಕನ್ನಡಕ್ಕೆ ರಿಮೇಕ್ ಆಗುತ್ತಿದೆ.

ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸುತ್ತಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಇದಕ್ಕೆ ಸಂಬಂಧಿಸಿದಂತೆ ವಣ್ಣ ಪ್ರತಿಕ್ರಿಯಿಸಿದ್ದಾರೆ. ‘ನಾನು ‘ವಿಶ್ವಾಸಂ’ ಸೇರಿದಂತೆ ಸದ್ಯ ಯಾವುದೇ ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.

ಇತ್ತಿಚೆಗಷ್ಟೇ ಅವರು ಮಲೆಯಾಳಂನ ‘ಒಪ್ಪಂ’ ಚಿತ್ರದಲ್ಲಿ ನಟಿಸಿದ್ದರು. ಇದು ‘ಕವಚ’ ಹೆಸರಿನಲ್ಲಿ ತೆರೆ ಕಂಡಿತ್ತು. ಇದೇ ವೇಳೆ ಅವರು ‘ಕಥೆ-ಪಾತ್ರ ಚೆನ್ನಾಗಿದ್ದರೆ ರಿಮೇಕ್ ಮಾಡಲು ನನ್ನದೇನೂ ಅಭ್ಯಂತರ ಇಲ್ಲ’ ಎಂದಿದ್ದರು.