ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾತ್ರೋರಾತ್ರಿ ಡಿಸ್ಮಿಸ್: ಸಿಎಂ ಹೆಚ್.ಡಿಕೆ ವಿರುದ್ದ ‘ಕೈ’ ನಾಯಕರ ಅಸಮಾಧಾನ..?

ಬೆಂಗಳೂರು,ಮೇ,22,2019(www.justkannada.in) ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯನ್ನ ರಾತ್ರೋರಾತ್ರಿ ಡಿಸ್ಮಿಸ್ ಮಾಡಿದ್ದಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನಕ್ಕೆ ನರಸಿಂಹಮೂರ್ತಿ ಅವರನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೇ ರಾತ್ರೋರಾತ್ರಿ ಅಭ್ಯರ್ಥಿಯನ್ನ ಡಿಸ್ಮಿಸ್ ಮಾಡಲಾಗಿದ್ದು, ಇದರ ಹಿಂದೆ ಸಚಿವ ಹೆಚ್.ಡಿ ರೇವಣ್ಣ ಅವರ ಕೈವಾಡ ಇದೆ. ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೊಟ್ಟಮಾತಿನಂತೆ ನಡೆದುಕೊಂಡಿಲ್ಲ ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಡೇರಿ ಅಧ್ಯಕ್ಷ ಸ್ಥಾನ ಚುನಾವಣೆ ಸಂಬಂಧ ನಿನ್ನೆ ಸಚಿವ ಕೃಷ್ಣೇಭೈರೇಗೌಡ ಹಾಗೂ ಇತರೇ ಕಾಂಗ್ರೆಸ್ ನಾಯಕರು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಭೇಟಿಯಾಗಿದ್ದರು. ಈ ವೇಳೆ ನರಸಿಂಹಮೂರ್ತಿ ಅಭ್ಯರ್ಥಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಒಪ್ಪಿಕೊಂಡಿದ್ದರು.

ಆದರೆ ಇದೀಗ ನೆಪವೊಡ್ಡಿ ಅಭ್ಯರ್ಥಿಯನ್ನ ಡಿಸ್ಮಿಸ್ ಮಾಡಲಾಗಿದೆ. ಈ ದಿಢೀರ್ ಬೆಳವಣಿಗೆ ಹಿಂದೆ ಸಚಿವ ಹೆಚ್,ಡಿ ರೇವಣ್ಣ ಇದ್ದಾರೆ ಎಂದು ಕೈ ನಾಯಕರು ಆರೋಪಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರು ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಸಭೆ ನಡಸಿ ಚರ್ಚಿಸಿದ್ದಾರೆನ್ನಲಾಗಿದೆ.  ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನಕ್ಕೆ ರಾಜ್ ಕುಮಾರ್ ಎಂಬುವವರನ್ನ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆ ಇದೆ.

ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಬೇಕಿದ್ದು, ಕಾಂಗ್ರೆಸ್ ಪಕ್ಷದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕಿತ್ತು. ಆದರೆ, ಸಿಎಂ ಕುಮಾರಸ್ವಾಮಿ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಕೆಲವು ಕಾಂಗ್ರೆಸ್ ಶಾಸಕರು ಗರಂ ಆಗಿದ್ದಾರೆ.

Key words: Elections to Bangalore dairy, President Candidate dismiss. displeasure against cm hd kumaraswamy

#Elections #Bangaloredairy #cmhdkumaraswamy #congressleader