ಆಗಲೇ ಅವರ ಆಟ ನೋಡಿದ್ದೇವೆ: ನಾವು ಸತ್ತರೂ  ಅವರ ಜತೆ ಹೋಗಲ್ಲ- ಬಿಜೆಪಿ ಶಾಸಕ ರೇಣುಕಾಚಾರ್ಯ…

Promotion

ಬೆಂಗಳೂರು,ಜು,12,2019(www.justkannada.in):  20-20 ಸರ್ಕಾರವಿದ್ದಾಗಲೇ ಜೆಡಿಎಸ್ ನವರ ಆಟ ನೋಡಿದ್ದೇವೆ. ಹೀಗಾಗಿ ನಾವೂ ಸತ್ತರೂ ಜೆಡಿಎಸ್ ಜತೆ ಹೋಗಲ್ಲ ಎಂದು ಬಿಜೆಪಿ ಶಾಸಕರ ರೇಣುಕಾಚಾರ್ಯ ತಿಳಿಸಿದ್ದಾರೆ.

ಬಿಜೆಪಿ ನಾಯಕರಾದ ಮುರುಳೀಧರ್ ರಾವ್ ಮತ್ತು ಕೆ.ಎಸ್ ಈಶ್ವರಪ್ಪರನ್ನ ಸಚಿವ ಸಾ.ರಾ ಮಹೇಶ್ ಭೇಟಿ ಮಾಡಿದ ವಿಚಾರ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ಸಾ.ರಾ ಮಹೇಶ್ ಮತ್ತು ಬಿಜೆಪಿ ನಾಯಕರ ಭೇಟಿ ಆಕಸ್ಮಿಕ.  ಸುಳ್ಳುಸುದ್ದಿ ಹಬ್ಬಿಸುವಲ್ಲಿ ಕುಮಾರಸ್ವಾಮಿ ನಿಸ್ಸಿಮರು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನ ಹೆದರಿಸಲು ಈ ರೀತಿ ಹೇಳಿದ್ದಾರೆ ಎಂದು ಕಿಡಿಕಾರಿದರು.

ಹಾಗೆಯೇ ಈ ಬಗ್ಗೆ ನಮ್ಮ ಕಾರ್ಯಕರ್ತರು ಫೋನ್ ಮಾಡಿ ಜೆಡಿಎಸ್ ಜತೆ ಸರ್ಕಾರ ಮಾಡ್ತೀರಾ ಅಂತಾ ಕೇಳ್ತಿದ್ದಾರೆ. ಇಲ್ಲ ಅದು ಆಕಸ್ಮಿಕ ಭೇಟಿ ಎಂದು ಹೇಳಿದ್ದೇನೆ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಜತೆ ಹೋಗಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.

Key words: already- seen -game.not go-  BJP MLA -Renukacharya.