ಮತ್ತೆ ಡಿಸೆಂಬರ್ ಮೇಲೆ ಅಲ್ಲು ಅರ್ಜುನ್ ‘ಪುಷ್ಪಾ’ ಟೀಂ ಕಣ್ಣು!

Promotion

ಬೆಂಗಳೂರು, ಫೆಬ್ರವರಿ 02, 2022 (www.justkannada.in): ‘ಪುಷ್ಪ ಪಾರ್ಟ್​ 1’ ಚಿತ್ರ 2021ರ ಡಿಸೆಂಬರ್ 17ಕ್ಕೆ ಬಿಡುಗಡೆ ಆಗಿ ಯಶಸ್ವಿ ಆಯಿತು. ಈಗ ಮತ್ತೆ ಡಿಸೆಂಬರ್​ 17ರ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ. ಪಾರ್ಟ್ 2 ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿದೆ.

2022ರ ಡಿಸೆಂಬರ್​ 17ರಂದು ಎರಡನೇ ಪಾರ್ಟ್​ ರಿಲೀಸ್​ ಮಾಡಲು ಪ್ಲ್ಯಾನ್​ ರೂಪಿಸಿದೆ ಎಂಬ ಮಾತುಗಳು ಸಿನಿ ವಲಯದಲ್ಲಿ ಕೇಳಿಬಂದಿವೆ.

ಈಗಾಗಲೇ ಪುಷ್ಪ ಪಾರ್ಟ್​-2 ಸಹ ಸ್ವಲ್ಪ ಭಾಗ ಸಿನಿಮಾ ಶೂಟಿಂಗ್​ ಆಗಿದ್ದು ಅದರ ಜೊತೆಗೆ ಉಳಿದ ಎಲ್ಲಾ ಭಾಗವನ್ನೂ ಆದಷಚ್ಟು ಬೇಗ ಶೂಟ್​ ಮಾಡಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ.

ಸಿನಿಮಾ ತಂಡಕ್ಕೆ ಉಳಿದಿದ್ದು ಕೇವಲ 10 ತಿಂಗಳು ಮಾತ್ರ. ಆ ಹತ್ತು ತಿಂಗಳಲ್ಲಿ ಶೂಟಿಂಗ್​ ಪೂರ್ಣಗೊಳ್ಳಬೇಕಿದೆ.