ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ನಿಧನ.

ಬೆಂಗಳೂರು,ಫೆಬ್ರವರಿ,2,2022(www.justkannada.in): ಕ್ಯಾನ್ಸರ್​ನಿಂದ  ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ನಿಧನರಾಗಿದ್ದಾರೆ.

ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಹಿರಿಯ ನಟ ಅಶೋಕ್​ ರಾವ್​ ಅವರು ಕ್ಯಾನ್ಸರ್​ನಿಂದ  ಬಳಲುತ್ತಿದ್ದರು. ಹೀಗಾಗಿ  ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ 75 ವರ್ಷ ವಯಸ್ಸಾಗಿತ್ತು. ರಾತ್ರಿ 12.30ರ ವೇಳೆಗೆ ಅಶೋಕ್ ರಾವ್ ನಿಧನರಾಗದ್ದಾರೆ ಎನ್ನಲಾಗಿದೆ.   ಪತ್ನಿ, ಮಗಳು ಹಾಗೂ ಮಗನನ್ನು ಅಶೋಕ್​ ರಾವ್​ ಅಗಲಿದ್ದಾರೆ.

ಡಾ. ರಾಜ್​ಕುಮಾರ್​ ಸೇರಿದಂತೆ ಅನೇಕ ಸ್ಟಾರ್​ ಕಲಾವಿದರ ಜೊತೆ ಅಶೋಕ್​ ರಾವ್​ ತೆರೆಹಂಚಿಕೊಂಡಿದ್ದರು. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಅವರ ಅನುಭವ ಅಪಾರ. ನಿನ್ನೆ ರಾತ್ರಿಯವರೆಗೂ ಚೆನ್ನಾಗಿದ್ದರು. ಆದರೆ ಈಗ ಅವರು ನಿಧನರಾಗಿರುವುದು ನೋವಿನ ಸಂಗತಿ. ಹೃದಯಾಘಾರದಿಂದ ಅಶೋಕ್​ ರಾವ್​ ಮೃತರಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಡಾ. ರಾಜ್​ಕುಮಾರ್​ ನಟನೆಯ ‘ಪರಶುರಾಮ್​’ ಸಿನಿಮಾದಲ್ಲಿ ಅಶೋಕ್ ರಾವ್ ಖಳ ನಟನಾಗಿ ಅವರು ಗಮನ ಸೆಳೆದಿದ್ದರು. ಅಶೋಕ್​ ರಾವ್​ ಅವರ ಪ್ರತಿಭೆಯನ್ನು ಗಮನಿಸಿದ್ದ ರಾಜ್​ಕುಮಾರ್​ ಅವರೇ ಕರೆದು ‘ಪರಷುರಾಮ್​’ ಸಿನಿಮಾದ ವಿಲನ್​ ಪಾತ್ರವನ್ನು ಅವರಿಗೆ ನೀಡಿದ್ದರು. ಹಲವು ವರ್ಷಗಳ ತಮ್ಮ ಸಿನಿಮಾ ಜರ್ನಿಯಲ್ಲಿ ಅಶೋಕ್​ ರಾವ್​ ಅವರು ಅನೇಕ ಬಗೆಯ ಪಾತ್ರಗಳನ್ನು ಮಾಡಿದ್ದರು. ವಿಲನ್​ ಪಾತ್ರಗಳ ಮೂಲಕ  ಅಶೋಕ್ ರಾವ್ ಮಿಂಚಿದ್ದರು.

Key words: kannada actor- Ashok Rao-death

ENGLISH SUMMARY…

Veteran sandalwood actor Ashok Rao no more
Bengaluru, February 2, 2022 (www.justkannada.in): Sandalwood’s senior actor Ashok Rao who was suffering from cancer breathed his last today.
Ashok Rao has acted in hundreds of movies. He was suffering from cancer for quite some time now. He was 75 years old. He reportedly breathed his last at 12.30 midnight. He has left behind his wife, daughter, and son.
He had shared the screen with stalwarts like Dr. Rajkumar and others in sandalwood. The cremation will be held at 2.30 pm at Hebbal today.
Keywords: Sandalwood actor Ashok rao/ no more