ಗ್ಯಾಪ್ ಬಳಿಕ ಆಲಿಯಾ, ರಶ್ಮಿಕಾ, ಪೂಜಾ ಹೆಗ್ಡೆ ಜೊತೆ ಬ್ಯಾಕ್ ಬ್ಯಾಕ್ ಚಿತ್ರಗಳಲ್ಲಿ ಅಲ್ಲು ಅರ್ಜುನ್ !

Promotion

ಬೆಂಗಳೂರು, ಜೂನ್ 28, 2019 (www.justkannada.in): ಡ್ಯಾನ್ಸಿಂಗ್ ಸ್ಟಾರ್ ಅಲ್ಲು ಅರ್ಜುನ್ ದೊಡ್ಡ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

ದೊಡ್ಡ ಗ್ಯಾಪ್ ನಂತರ ಮೂರು ಚಿತ್ರಗಳನ್ನು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಅಲ್ಲು. ಇದೀಗ ತ್ರಿವಿಕ್ರಮ್, ನಿರ್ದೇಶನದಲ್ಲಿ ನಟಿಸುತ್ತಿದ್ದು ಸುಕುಮಾರ್ ಅವರ ಮುಂಬರುವ ಚಿತ್ರ ಮತ್ತು ವೇಣು ಶ್ರೀರಾಮ್ ಅವರ ಐಕಾನ್ ಚಿತ್ರದಲ್ಲಿ ನಟಿಸಬೇಕಿದೆ.

ತ್ರಿವಿಕ್ರಮ್ ಅವರ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ನಿವೇತಾ ಪೆತುರಾಜ್ ಮುಖ್ಯ ಪಾತ್ರದಲ್ಲಿದ್ದರೆ, ಸುಕುಮಾರ್ ಅವರ ಚಿತ್ರ ರಶ್ಮಿಕಾ ಮಂದಣ್ಣ ಎಂದು ಖಚಿತಪಡಿಸಿದ್ದಾರೆ. ‘ಐಕಾನ್’ ಚಿತ್ರ್ಕಕಾಗಿ ಆಲಿಯಾ ಭಟ್ ಜತೆ ಮಾತುಕತೆ ನಡೆದಿದೆ.