ಸಿಎಂ ಆಗಲು ನನಗೆ ಅವಕಾಶ ಕೊಡಿ ಅಥವಾ ನೀವೇ ಸಿಎಂ ಆಗಿ- ಖರ್ಗೆಗೆ ಡಿಕೆ ಶಿವಕುಮಾರ್ ಒತ್ತಾಯ..?

Promotion

ನವದೆಹಲಿ,ಮೇ,17,2023(www.justkannada.in):  ಮುಖ್ಯಮಂತ್ರಿ ಹುದ್ದೆಗೆ ಬಿಗಿಪಟ್ಟು ಹಿಡಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವೊಲಿಸಲು ಕಾಂಗ್ರೆಸ್ ಹೈಕಮಾಂಡ್ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದುಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ತನ್ನ ಪಟ್ಟು ಸಡಿಲಿಸದ ಡಿ.ಕೆ ಶಿವಕುಮಾರ್, ನನಗೆ ಸಿಎಂ ಆಗಲು ಅವಕಾಶ ಕೊಡಿ. ಇಲ್ಲದಿದ್ದರೇ ನೀವೇ ಸಿಎಂ ಆಗಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಡಿ.ಕೆ ಶಿವಕುಮಾರ್ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ  ಖರ್ಗೆ ಅವರ ಜೊತೆ ಮಾತನಾಡಿರುವ ಡಿಕೆಶಿ, ನಾನು ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಅಧಿಕಾರಕ್ಕೆ ತಂದಿದ್ದೇನೆ.  ನನಗೆ ಸಿಎಂ ಆಗಲು ಅವಕಾಶ ನೀಡದಿದ್ದರೇ ನೀವೇ ಆಗಿ ನೀವೇ ಸಿಎಂ ಆಗಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

2018ರಲ್ಲಿ ಸಿದ್ದರಾಮಯ್ಯ ನೇತೃತ್ವವದಲ್ಲಿ ಚುನಾವಣೆ ಎದುರಿಸಿದವು ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಸೋತಿದ್ದವು. ನಾನು ಕೆಪೊಸಿಸಿ ಅಧ್ಯಕ್ಷನಾಗಿ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ.  ಸಿಎಂ ಆಗಲು ನನಗೆ ಅವಕಾಶ ಕೊಡಿ ಇಲ್ಲಾ ನೀವೇ ಆಗಿ  ರಾಜ್ಯದಲ್ಲಿ ದಲಿತ ಸಿಎಂ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ದಲಿತರು ಸಿಎಂ ಆದ್ರೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದಿದ್ದಾರೆ ಎನ್ನಲಾಗಿದೆ. ಇನ್ನು  ಸೋನಿಯಾ ಗಾಂಧಿ,  ರಾಹುಲ್ ಗಾಂಧಿ ಜತೆ ಚರ್ಚಿಸಿ ಅಂತಿಮ  ನಿರ್ಧಾರ ತಿಳಿಸುವುದಾಗಿ ಖರ್ಗೆ  ಡಿಕೆಶಿಗೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Allow -me – become- CM – DK Shivakumar –Mallikarjuna  Kharge.