ಅಲಯನ್ಸ್ ವಿವಿ  ವಿಶ್ರಾಂತ ವಿಸಿ ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಆರು ಮಂದಿ ಆರೋಪಿಗಳು ಅರೆಸ್ಟ್…

Promotion

ಬೆಂಗಳೂರು,ಅ,17,2019(www.justkannada.in) ನಗರದ ಅಲಯನ್ಸ್ ವಿವಿ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು 6 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ರಾತ್ರಿ ವಾಕಿಂಗ್ ಹೋಗಿದ್ದ ವೇಳೆ ಅಯ್ಯಪ್ಪ ದೊರೆಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಸುಧೀರ್ ಅಂಗೂರ್ ಮತ್ತು ಸೂರಜ್ ಸೇರಿ 6 ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ. ಇನ್ನು ಅಯ್ಯಪ್ಪ ದೊರೆ ಮತ್ತು ಮಧುಕರ್ ಎಂಬುವವರನ್ನ  ಹತ್ಯೆ ಮಾಡಲು ಸುಧೀರ್ ಅಂಗೂರ್ ಎಂಬುವವರು  ಸೂರಜ್ ಗೆ 1 ಕೋಟಿಗೆ ಸುಪಾರಿ ನೀಡಿದ್ದನು ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪ್ರಕರಣ ಸಂಬಂಧ 8 ತಂಡ ರಚಿಸಲಾಗಿತ್ತು. ಇದೀಗ ಸುಧೀರ್ ಅಂಗೂರ್  ಸೇರಿ 6 ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ. ಸುಧೀರ್ ಅಂಗೂರ್  ಅಲಯನ್ಸ್ ವಿವಿ ಕುಲಪತಿಯಾಗಿದ್ದು, ಅಲಯನ್ಸ್ ವಿವಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಇತ್ತು. ಈ ಕಾರಣಕ್ಕೆ ಹತ್ಯೆಯಾಗಿದೆ ಎಂದು ಆರೋಪಿ ಸೂರಜ್ ತಪ್ಪೊಪ್ಪಿಕೊಂಡಿದ್ದಾನೆ. ತನಿಖೆ ಮುಂದುವರೆಯಲಿದೆ  ಎಂದು ಮಾಹಿತಿ ನೀಡಿದರು.

ತನಿಖಾ ತಂಡಕ್ಕೆ ನಗರ ಪೊಲೀಸ್ ಆಯುಕ್ತ  ಭಾಸ್ಕರ್ ರಾವ್ 1 ಲಕ್ಷ ಬಹುಮಾನ ಘೋಷಿಸಿದ್ದಾರೆ ಎನ್ನಲಾಗಿದೆ.

Key word: Alliance university- retired VC –Ayyappa-murder case-arrest