ಇಂದಿನಿಂದ ಹಾಸನಾಂಬ ದೇಗುಲದ ಬಾಗಿಲು ಓಪನ್: ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ

ಹಾಸನ,ಅ,17,2019(www.justkannada.in):  ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗಿದ್ದು, ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಇಂದು ಸಾಂಪ್ರದಾಯಕ ಪೂಜೆ ಬಳಿಕ ಅರಸು ವಂಶದ ನಟರಾಜು ಅವರು ಬನ್ನಿ ಕಡಿದು ಹಾಸನಾಂಬ ದೇಗುಲದ ದ್ವಾರ ತೆರೆದರು. ಇಂದಿನಿಂದ  13 ದಿನಗಳ ಕಾಲ  ಹಾಸನಾಂಬ ದೇವಾಲಯದ ಬಾಗಿಲು ದಿನ ತೆರೆದಿರಲಿದ್ದು,  11 ದಿನಗಳು ಮಾತ್ರ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ. ಇಂದು ಹಾಗೂ ಕೊನೆಯ ದಿನ ಮಾತ್ರ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ನಾಳೆಯಿಂದ ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದಲೇ ದೇವಿಯ ದರ್ಶನ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ 3.30ಕ್ಕೆ ಮುಕ್ತಾಯವಾಗಲಿದೆ.

ದೇವಿಯ ದರ್ಶನಕ್ಕಾಗಿ ಹಾಸನ ಮಾತ್ರವಲ್ಲದೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತಸಾಗರ ಹರಿದು ಬರಲಿದೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

Key words: Hasanamba Temple- Open – door  -devotees.