ಮೈಸೂರು ಪಾಲಿಕೆಯಲ್ಲಿ ಇನ್ನು ಮೂರು ವರ್ಷಗಳ ಕಾಲ ಮೈತ್ರಿ ಮುಂದುವರೆಯುತ್ತೆ-ಶಾಸಕ ತನ್ವೀರ್ ಸೇಠ್…

ಮೈಸೂರು,ಜನವರಿ,18,2021(www.justkannada.in): ಮೈಸೂರು  ನಗರ ಪಾಲಿಕೆಯಲ್ಲಿ  ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಐದು ವರ್ಷಗಳ ಆಳ್ವಿಕೆಗೆ ಮೈತ್ರಿ ಒಪ್ಪಂದ ಆಗಿದೆ. ಮಾತುಕತೆಯಂತೆ ಐದು ವರ್ಷದಲ್ಲಿ ಎರಡು ವರ್ಷ ಪೂರೈಸಿದ್ದೇವೆ. ಇನ್ನು ಮೂರು ವರ್ಷ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್,   ಮೈಸೂರು ಮಹಾನಗರ  ಪಾಲಿಕೆಯಲ್ಲಿ ಐದು ವರ್ಷಗಳ ಆಳ್ವಿಕೆಗೆ ಮೈತ್ರಿ ಒಪ್ಪಂದ ಆಗಿದೆ. ಮಾತುಕತೆಯಂತೆ ಐದು ವರ್ಷದಲ್ಲಿ ಎರಡು ವರ್ಷ ಪೂರೈಸಿದ್ದೇವೆ. ಇನ್ನು ಮೂರು ವರ್ಷ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರೆಯಲಿದೆ. ಅನುದಾನ , ಸಂಪನ್ಮೂಲದ ಕೊರತೆಯಿಂದ ಕೆಲಸ ಮಾಡಲು ಆಗ್ತಿಲ್ಲ ಎಂಬ ಬೇಸರದಿಂದ ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡ್ತೀವಿ ಅಂತ ಹೇಳೊದು ಸಹಜ. ಮೇಯರ್ ಉಪ ಮೇಯರ್ ಮೀಸಲಾತಿ ಪ್ರಕಟ ಬಳಿಕ‌ ಮಾತುಕತೆ ನಡೆಸುತ್ತೇವೆ. ಸಾ.ರಾ.ಮಹೇಶ್, ಜಿ.ಟಿ.ದೇವೆಗೌಡ ಜೊತೆ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಒಂದಿಂಚೂ ಭೂಮಿ ಬೇರೆಯವರಿಗೆ ಕೊಡುವೆ ಪ್ರಶ್ನೆಯೇ ಇಲ್ಲ.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆ ಎಂದು ಉದ್ದವ್ ಠಾಕ್ರೆ ಟ್ವಿಟ್ ಹಿನ್ನೆಲೆ ಈ ಬಗ್ಗೆ ಕಿಡಿಕಾರಿದ ಶಾಸಕ ತನ್ವೀರ್ ಸೇಠ್,  ಈ ರೀತಿ ಟ್ವಿಟ್ ಮಾಡುವುದು ದೇಶ ದ್ರೋಹಿಗಳು ಮಾಡುವ ಕೆಲಸ. ಏಕೀಕರಣದ ಬಳಿಕ ನಮ್ಮ ಒಂದಿಂಚೂ ಭೂಮಿ ಬೇರೆಯವರಿಗೆ ಕೊಡುವೆ ಪ್ರಶ್ನೆಯೇ ಇಲ್ಲ. ಅನಾವಶ್ಯಕ ಈ ರೀತಿ ಟ್ವಿಟ್ ಮಾಡೋದು ದೇಶದ್ರೋಹಿಗಳು ಮಾಡುವ ಕೆಲಸ. ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ಕೊಡುವ ಪ್ರಶ್ನೆಯೇ ಇಲ್ಲ ಎಂದರು.alliance - continue - three more years – Mysore city corporation-. MLA Tanveer Saith

ಗಡಿಭಾಗಗಳ ಅಭಿವೃದ್ಧಿಗಾಗಿ ಸುವರ್ಣಸೌಧ ಕಟ್ಟಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಅಲ್ಲಿ ಅಧಿವೇಶನಗಳೇ ನಡೆದಿಲ್ಲ‌. ಉತ್ತರ ಕರ್ನಾಟಕದ ಅಭಿವೃದ್ದಿ ಎಂಬುದು ಕೇವಲ ನೆಪ. ಇತ್ತೀಚೆಗೆ ಉತ್ತರ ಕರ್ನಾಟಕದ ಅಭಿವೃದ್ದಿ ಕೇವಲ ರಾಜಕೀಯ ವಿಷಯವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಇದನ್ನೇ ಬಂಡವಾಳ ಮಾಡಿಕೊಂಡಿವೆ. ನಮ್ಮ ರಾಜ್ಯ ನೆಲ ಜಲ ಭಾಷೆ ಮೇಲೆ ಅಭಿಮಾನ ಇರಬೇಕು. ಈ ವಿಚಾರದಲ್ಲಿ ಸ್ವಾಭಿಮಾನದಿಂದ ನಡೆದುಕೊಳ್ಳಬೇಕು ಎಂದು ಶಾಸಕ ತನ್ವೀರ್ ಸೇಠ್ ಅಸಮಧಾನ ವ್ಯಕ್ತಪಡಿಸಿದರು.

Key words: alliance – continue – three more years – Mysore city corporation-. MLA Tanveer Saith