ಸರ್ವ ಸ್ಪರ್ಶಿ, ಸರ್ವವ್ಯಾಪಿ ಬಜೆಟ್ ದೇಶದ ಅಭಿವೃದ್ದಿಗೆ ಪೂರಕ- ವಿಪಕ್ಷಗಳ ಟೀಕೆಗೆ ಸಿಎಂ ಬೊಮ್ಮಾಯಿ ಟಾಂಗ್.

ಬೆಂಗಳೂರು,ಫೆಬ್ರವರಿ,2,2023(www.justkannada.in):  ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023-23ನೇ ಕೇಂದ್ರ ಬಜೆಟ್ ಬಗ್ಗೆ ಟೀಕೆ ವ್ಯಕ್ತಪಡಿಸಿದ ವಿಪಕ್ಷಗಳ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇಶದ ಅಭಿವೃದ್ದಿಗೆ ಬಜೆಟ್ ಪೂರಕವಾಗಿದೆ. ಇದು ಸರ್ವಸ್ಪರ್ಶಿ ಸರ್ವವ್ಯಾಪಿ ಬಜೆಟ್ . ಕೃಷಿ ಫೈನಾನ್ಸ್ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ.   ಘನತ್ಯಾಜ್ಯ ನಿರ್ವಹಣೆಗೂ ಕೇಂದ್ರ ಅನುದಾನ ನೀಡುತ್ತಿದೆ. ಜಲಜೀವನ್ ಮಿಷನ್ ಗ ಹೆಚ್ಚು ಅನುದಾನ ನೀಡಿದ್ದಾರೆ. ಕೃಷಿ ಕ್ಷೇತ್ರಕ್ಕ 1 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದರು.

ಬಜೆಟ್​ನಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಯೋಜನೆಗೆ ಅನುದಾನ ಇಟ್ಟಿದ್ದಾರೆ. ಸಣ್ಣ ಕೈಗಾರಿಕೆಗೆ ಮಿತಿಯನ್ನು 75 ಲಕ್ಷದಿಂದ 3 ಕೋಟಿಗೆ ಹೆಚ್ಚಳ ಮಾಡಿದ್ದಾರೆ. ಆರೋಗ್ಯ ಶಿಕ್ಷಣಕ್ಕೂ ಅನುದಾನ ಹೆಚ್ಚಳ ಮಾಡಲಾಗಿದೆ, ಉದ್ಯೋಗ, ಕೌಶಲ್ಯಾಭಿವೃದ್ದಿ, ಕೃಷಿಗೆ ಅನುದಾನ ಹೆಚ್ಚಳ ಮಾಡಿದ್ದಾರೆ. ಕೃಷಿ ರಾಜ್ಯ ವಿಷಯ ಆಗಿದ್ದರೂ ಇದು ರಾಜ್ಯಗಳಿಗೆ ಲಾಭ ಆಗಲಿದೆ ಎಂದರು.

ನಿಜಲಿಂಗಪ್ಪ ಕಾಲದಿಂದ ಭದ್ರಾ ಮೇಲ್ದಂಡೆ ಯೋಜನೆ ಮಾಡಬೇಕು ಅಂತ ಇತ್ತು. ಆದರೆ ಈ ಯೋಜನೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭವಾಯಿತು. ಈಗ ಬಜೆಟ್ ನಲ್ಲಿ ಅನುದಾನ ಘೋ಼ಷಣೆ ಮಾಡಲಾಗಿದೆ. ಈ ಹಿನ್ನೆಲೆ ವಿಪಕ್ಷದವರು ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬದ್ಧ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ನಮ್ಮ ದೇಶದ ಹಣಕಾಸು ಪರಿಸ್ಥಿತಿ ಭದ್ರ ಬುನಾದಿ ಮೇಲಿದೆ. ಭಾರತದ ಜಿಡಿಪಿ ಆರೋಗ್ಯಕರವಾಗಿದೆ. ಭಾರತದ ಆರ್ಥಿಕ ಸ್ಥಿತಿ ಶೇ.6.8 ರಷ್ಟಿದೆ.  ಕರ್ನಾಟಕ ಪ್ರಗತಿಪರ ರಾಜ್ಯವಾಗಿರುವುದರಿಂದ ಅಭಿವೃದ್ದಿಗೆ ಒತ್ತು  ನೀಡಲಾಗಿದೆ. ಕೇಂದ್ರದ ಅನುದಾನದ ಜತೆ ರಾಜ್ಯದ ಪಾಲು ಸೇರಿಸಿ ಅಭಿವೃದ್ದಿ ಮಾಡಲಾಗುತ್ತದೆ. ಕೇಂದ್ರ ಹಲವು ಯೋಜನೆಗಳಿಗೆರಾಜ್ಯದ ಪಾಲು ಸೇರಬೇಕು ಎಂದರು.

Key words: All-pervasive- all-encompassing –budget-development – country- CM Bommai