ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕ ಪ್ರತಿಷ್ಟೆಯ ಕಣ: ಎಲ್ಲರು ಒಗ್ಗಟ್ಟಾಗಿದ್ದೇವೆ- ಆರ್.‍ ಧ್ರುವನಾರಾಯಣ್.

Promotion

ನವದೆಹಲಿ,ಡಿಸೆಂಬರ್,12,2022(www.justkannada.in):  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕ ಪ್ರತಿಷ್ಟೆಯ ಕಣವಾಗಿದ್ದು, ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ ಎಲ್ಲರು ಒಗ್ಗಟ್ಟಾಗಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್.‍ ಧ್ರುವನಾರಾಯಣ್ ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ ರಾಜ್ಯದ ನಾಯಕರ ಜೊತೆ ಸಭೆ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ನವದೆಹಲಿಗೆ ತೆರಳಿದ್ದಾರೆ.

ಸಭೆ ಸಂಬಂಧ ಮಾತನಾಡಿದ ಆರ್.ಧೃವನಾರಾಯಣ್,  ಎಐಸಿಸಿ ಅಧ್ಯಕ್ಷರಾದ ನಂತರ ಮಲ್ಲಿಕಾರ್ಜುನ ಖರ್ಗೆ ಮೊದಲ ಸಭೆ ನಡೆಸುತ್ತಿದ್ದಾರೆ ರಾಜ್ಯದ ನಾಯಕರ ಜೊತೆ ಚರ್ಚೆ ನಡೆಸುತ್ತಾರೆ.   ಪಕ್ಷ ಸಂಘಟನೆ, ಚುನಾವಣೆ ಗೆಲ್ಲಲು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಚರ್ಚೆಯಾಗಲಿದೆ. ಈವರೆಗೆ ನಡೆದಿರುವ ಬಹತೇಕ  ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸಭೆಯಲ್ಲಿ ಯಾವ್ಯಾವ ವಿಚಾರ ಪ್ರಸ್ತಾಪಿಸುತ್ತಾರೆ ನೋಡೋಣ ಎಂದು ಆರ್.ಧೃವನಾರಾಯಣ್ ತಿಳಿಸಿದರು.

Key words: AICC-President- Mallikarjuna Kharge –meeting-R. Dhruvanarayan.