ಎಐಸಿಸಿ ಸಾಮಾಜಿಕ ಜಾಲತಾಣದ ಉಸ್ತುವಾರಿ: ನಟಿ ರಮ್ಯಾಗೆ ಗೇಟ್ ಪಾಸ್

Promotion

ಬೆಂಗಳೂರು, ಆಗಸ್ಟ್ 30, 2019 (www.justkannada.in): ಎಐಸಿಸಿ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನು ಹೊಸ ತಂಡಕ್ಕೆ ನೀಡಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ.

ಈ ಮೂಲಕ ಮಾಜಿ ಸಂಸದೆ ರಮ್ಯಾ ಅವರನ್ನು ಸಾಮಾಜಿಕ ಜಾಲತಾಣದ ಮುಖ್ಯಸ್ಥರ ಸ್ಥಾನದಿಂದ ಕೈಬಿಡಲಾಗಿದೆ ಎಂದು ಹೇಳಲಾಗಿದೆ.

ಲೋಕಸಭೆ ಚುನಾವಣೆ ಸೋಲಿನ ಬಳಿಕ ರಮ್ಯಾ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಲ್ಲದೆ, ಅವರ ತಂಡ 8 ಕೋಟಿ ರೂ. ಖರ್ಚು ಮಾಡಿದ ಬಗ್ಗೆ ಲೆಕ್ಕ ಕೊಟ್ಟಿಲ್ಲ ಎಂದು ಹೇಳಲಾಗಿದೆ.

ಲೋಕಸಭೆ ಚುನಾವಣೆ ನಂತರದಲ್ಲಿ ಪಕ್ಷದ ವಿವಿಧ ಜವಾಬ್ದಾರಿಗಳಿಂದ ಮತ್ತು ಉಸ್ತುವಾರಿಗಳಿಂದ ರಮ್ಯಾ ದೂರವಾಗಿದ್ದಾರೆ.