ಬಿಎಂಟಿಸಿ ಟಿಕೆಟ್‌ ಗಳು, ಪಾಸ್‌ ಗಳನ್ನು ಮಾರಾಟ ಮಾಡಲು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ.

ಬೆಂಗಳೂರು, ಮಾರ್ಚ್ 29, 2022(www.justkannada.in): ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್ಸುಗಳು ಟಿಕೆಟ್‌ ಗಳು ಹಾಗೂ ಬಸ್ ಪಾಸ್‌ ಗಳನ್ನು, ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ಯುಪಿಐ ಇಂಟರ್‌ ಫೇಸ್‌ ಗಳನ್ನೂ ಒಳಗೊಂಡಂತೆ ಮೊಬೈಲ್ ಫೋನ್‌ ಗಳ ಮೂಲಕ ಪೇಮೆಂಟ್ ಗೇಟ್‌ ವೇಗಳ ಮೂಲಕ ಬುಕ್ಕಿಂಗ್ ಮಾಡಲು ಅನುವು ಮಾಡಿಕೊಡಲು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಸಂಬಂಧ ಮಾತನಾಡಿದ ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಐಎಫ್‌ಎಸ್ ಅಧಿಕಾರಿ ಎ.ವಿ. ಸೂರ್ಯಸೇನ್ ಅವರು, “ಇದೊಂದು ವ್ಯಾಪಾರದ ಮಾದರಿಯಾಗಿದ್ದು, ನಮ್ಮ ಟಿಕೆಟ್‌ ಗಳನ್ನು ಮಾರಾಟ ಮಾಡಲು ಕಂಪನಿಗಳಿಗೆ ಅನುಮತಿ ನೀಡುತ್ತಿದ್ದೇವೆ. ನಮ್ಮ ನಿಯಮಗಳಿಗೆ ಬದ್ಧವಾಗಿ ಒಪ್ಪಂದ ಮಾಡಿಕೊಳ್ಳುವ ಕಂಪನಿಗಳಿಗೆ ನಮ್ಮ ದತ್ತಾಂಶವನ್ನು ಒದಗಿಸುತ್ತೇವೆ. ಇದು ನಮ್ಮ ಪ್ರಯಾಣಿಕರಿಗೆ ಅನುಕೂಲವಾಗಲಿದೆ,” ಎಂದಿದ್ದಾರೆ.

ಮೊದಲ ಹಂತದಲ್ಲಿ ಬಿಎಂಟಿಸಿ ಈ ಸಂಬಂಧ, ಮೊಬೈಲ್ ಆಪ್ ಮೂಲಕ ವೋಲ್ವೊ ಹಾಗೂ ವಿದ್ಯುತ್ ಬಸ್ಸುಗಳಿಗೆ ಪಾಸುಗಳನ್ನು ವಿತರಿಸುತ್ತಿರುವ, ಟುಮ್ಮಾಕ್ (Tummoc) ಎಂಬ ನಗದುರಹಿತ ಪ್ರಯಾಣದ ಪರಿಹಾರಗಳನ್ನು ಒದಗಿಸುತ್ತಿರುವ ಬೆಂಗಳೂರು ನಗರ ಮೂಲದ ಕಂಪನಿಯೊAದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಬಿಎಂಟಿಸಿಗೆ ಇದು ಒಂದು ರೀತಿಯ ಪರೀಕ್ಷೆಯಾಗಿದ್ದು, ದೀರ್ಘಾವಧಿಯಲ್ಲಿ ಎದುರಾಗುವಂತಹ ಸಮಸ್ಯೆಗಳನ್ನು ಈ ಯೋಜನೆ ಮೌಲ್ಯಮಾಪನ ಮಾಡಲಿದೆ. ಈ ಮೂಲಕ ನಾವು ಕಲಿಯುವ ಪಾಠಗಳು, ಭವಿಷ್ಯದಲ್ಲಿ ಈ ಯೋಜನೆಯನ್ನು ಇಡೀ ಬಿಎಂಟಿಸಿಗೆ ವ್ಯಾಪಿಸಿದಾಗ ನೆರವಾಗಲಿವೆ ಎನ್ನುವು ಬಿಎಂಟಿಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ.

“ನಮ್ಮ ಸಿಬ್ಬಂದಿ (ನಿರ್ವಾಹಕರು) ಈಗಾಗಲೇ ಈ ಉಪಾಯವನ್ನು ಸ್ವಾಗತಿಸಿದ್ದಾರೆ. ಬಹುಮುಖ್ಯವಾಗಿ ನಮ್ಮ ಪ್ರಯಾಣಿಕರು ಸಂತಸಗೊAಡಿದ್ದಾರೆ. ಮುಂಬರುವ ದಿನಗಳಲ್ಲಿ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವವರು ತಮ್ಮ ಮೆಚ್ಚಿನ ಆಪ್‌ಗಳ ಮೂಲಕವೇ ಡಿಜಿಟಲ್ ಟಿಕೆಟ್‌ಗಳನ್ನು ಖರೀದಿಸಬಹುದು,” ಎಂದು ಸೇನ್ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು ಗೂಗಲ್‌ಪೇ, ಫೋನ್‌ ಪೇ ಅಥವಾ ಪೇಟಿಎಂನಂತಹ ವಿವಿಧ ಆಪ್‌ ಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು.

ಬಿಎಂಟಿಸಿಯು ತನ್ನ ದತ್ತಾಂಶವನ್ನೂ ಸಹ ಮಾರಾಟ ಮಾಡಲು ಆಲೋಚಿಸುತ್ತಿದೆ. “ಹಾಲಿ ಯೋಜನೆ (Tummoc)ಯನ್ನು ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನ ವಿಭಾಗದ ವತಿಯಿಂದಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯ ವಿಸ್ತರಣೆಗೆ ಹೆಚ್ಚು ಖರ್ಚಾಗುತ್ತದೆ. ಆದ್ದರಿಂದ ನಾವು ಸಂಪನ್ಮೂಲ ಮಾದರಿಯೊಂದಿನ್ನು ಹುಡುಕಬೇಕಿದೆ,” ಎಂದರು. ಬಿಎಂಟಿಸಿಯು ನಗದುರಹಿತ ಟಿಕೆಟ್ ಯೋಜನೆಯು ಮುಂಬರುವ ಟೆಂಡರ್ ಪ್ರಕ್ರಿಯೆ ಹಂತದಲ್ಲಿರುವ ಟಿಕೆಟಿಂಗ್ ವ್ಯವಸ್ಥೆಯೊಂದಿಗೆ ಪೂರಕವಾಗಿರಲಿದೆ.

ವೋಲ್ವೊ ಬಸ್ಸುಗಳಿಗೆ ಡಿಜಿಟಲ್ ಪಾಸ್ ವ್ಯವಸ್ಥೆ

Tummoc ಸಿಇಒ ಹಾಗೂ ಸಹಸ್ಥಾಪಕ ಹಿರಣ್‌ ಮೇ ಮಲ್ಲಿಕ್ ಅವರು ಅವರ ಡಿಜಿಟಲ್ ವೇದಿಕೆ ಈಗಾಗಲೇ ಡಿಜಿಟಲ್ ಮೋಡ್ ಮೂಲಕ ದೈನಂದಿನ/ ಸಾಪ್ತಾಹಿಕ/ ಮಾಸಿಕ ಪಾಸುಗಳನ್ನು ಒದಗಿಸಲು ಸಿದ್ಧವಾಗಿದೆ ಎಂದಿದ್ದಾರೆ.

” Tummoc ಒಂದು, ಸಾರ್ವಜನಿಕ ಸಾರಿಗೆಯ ಮಾರ್ಗಗಳ ಜೊತೆಗೆ ಮೊದಲ ಹಾಗೂ ಕೊನೆಯ ಹಂತದ ಸಂಪರ್ಕದ ವಿವರಗಳನ್ನು ಒದಗಿಸುವ ಬಹುಮಾದರಿ ಸಂಪರ್ಕ ವೇದಿಕೆಯಾಗಿದೆ. ನಾವು ಪಾಸುಗಳನ್ನು ವಿತರಿಸಲು ಸಿದ್ಧವಾಗಿದ್ದೇವೆ. ಈ ಸಂಬಂಧ ಟೆಸ್ಟಿಂಗ್ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ” ಎಂದು ಮಾಹಿತಿ ನೀಡಿದರು.

ಕಂಪನಿಯು ಬಿಎಂಟಿಸಿಗೆ ೧,೫೦೦ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂಗಳು) ಒದಗಿಸಲಿದೆ. “ಈ ಇಟಿಎಂಗಳು ಟಿಕೆಟ್‌ ಗಳನ್ನು ವಿತರಿಸಲು ನೆರವಾಗುವುದರ ಜೊತೆಗೆ, dynamic QR code system ಅನ್ನು ಆಧರಿಸಿ ಡಿಜಿಟಲ್ ಪಾಸುಗಳ ವಾಯಿದೆಯನ್ನೂ ಖಾತ್ರಿಪಡಿಸುತ್ತದೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Agreement – – BMTC –tickets- passes.