ಕೆಜಿಎಫ್ 2 ಬಳಿಕ ಯಶ್ ನೆಕ್ಟ್ಸ್ ಪ್ರಾಜೆಕ್ಟ್ ರಿವೀಲ್ !

Promotion

ಬೆಂಗಳೂರು, ಡಿಸೆಂಬರ್ 05, 2020 (www.justkannada.in): ಕೆಜಿಎಫ್ ಬಳಿಕ ಯಶ್ ಮುಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಜತೆ ಹೊಸ ಸಿನಿಮಾ ಮಾಡಲಿದ್ದಾರೆ.

ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ ಬಳಿಕ ಸೆಟ್ಟೇರುವ ಸಾಧ‍್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ತಿಂಗಳಲ್ಲಿ ಚಿತ್ರೀಕರಣ ಮುಗಿದರೆ ಕೆಜಿಎಫ್ 2 ಸಿನಿಮಾ ಪೂರ್ಣಗೊಳ್ಳಲಿದೆ. ಹೀಗಾಗಿ ಯಶ್ ಮುಂದಿನ ಸಿನಿಮಾ ಕುರಿತು ಸಾಕಷ್ಟು ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿತ್ತು.

ಕೇವಲ ಕೆಜಿಎಫ್ ಸಿನಿಮಾಗಾಗಿ ಈಗಾಗಲೇ ಯಶ್ ಮೂರು ವರ್ಷ ಮೀಸಲಿಟ್ಟಿದ್ದರು. ಈ ನಡುವೆ ಯಾವುದೇ ಹೊಸ ಚಿತ್ರ ಮಾಡಿರಲಿಲ್ಲ. ಇದೀಗ ಮಫ್ತಿ ನಿರ್ದೇಶಕನ ಜತೆ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.