ನಾಳೆ ಭಾರತ ಭಾಗ್ಯ ವಿಧಾತ ರೂಪಕ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ

ಮೈಸೂರು,ಡಿಸೆಂಬರ್,05,2020(www.justkannada.in) : ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಸರ್ಕಾರಿ ಬಾಲಕಿಯರ ಬಾಲ ಮಂದಿರ ವತಿಯಿಂದ ಡಿ.06ರಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 64ನೇ ವರ್ಷದ ಮಹಾಪರಿನಿರ್ವಾಣ ದಿನದ ಅಂಗವಾಗಿ ‘’ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಾಣದ ಭಾರತ ಭಾಗ್ಯ ವಿಧಾತ ರೂಪಕ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ’’ ಆಯೋಜಿಸಲಾಗಿದೆ.logo-justkannada-mysoreಭಾನುವಾರ ಬೆಳಗ್ಗೆ 10ಕ್ಕೆ ಮಾನಸಗಂಗೋತ್ರಿಯ ಆವರಣದಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬುದ್ದರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 11ಕ್ಕೆ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಭಾರತ ಭಾಗ್ಯ ವಿಧಾತ ರೂಪಕ ಪ್ರದರ್ಶನಕ್ಕೆ ಡಾ.ಎಸ್.ದಿವಾಕರ್ ಚಾಲನೆ ನೀಡಲಿದ್ದಾರೆ.

Tomorrow-India's-Bhagya-Vidhatha-dialogue-program

ಡಾ.ಬಿ.ಆರ್.ಅಂಬೇಡ್ಕರ್ ಪೀಠ ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರ ಅವರು ಸಂವಾದದಲ್ಲಿ ಭಾಗವಹಿಸಲಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

english summary….

Bharata Bhagya Vidhaata play and interaction programme tomorrow
Mysuru, Dec. 5, 2020 (www.justkannada.in): A programme has been organised on December 6, 2020, by the Dr. B.R. Ambedkar Research and Extension Centre, Mysore University and Government Girls Bala Mandira, on the occasion of the Dr. B.R. Ambedkar’s 64th Parinirvaana Divas. The Department of Information and Publicity has organised a play titled ‘Bharatha Bhagya Vidhaata’ and an interactive programme.
The inmates of the Bala Mandira will present the play at 11.00 am. Dr. S. Diwakar will inaugurate the programme. Sri Basavaraj Devanuru, Professor, Dr. B.R. Ambedkar Peetha interviewer will participate in the interaction programme and Prof. G. Somashekar, Director, Dr. B.R. Ambedkar Research and Extension Centre will preside over.Tomorrow-India's-Bhagya-Vidhatha-dialogue-program
Keywords: Dr. B.R. Ambedkar Parinirvaana Divas/ Bharatha Bhagya Vidhaata/ Mysore University

key words : Tomorrow-India’s-Bhagya-Vidhatha-dialogue-program