ಚುನಾವಣಾ ನಂತರ ಸಿಎಂ ಭೇಟಿಯಾಗಿ ಹುಣಸೂರನ್ನ ದೇವರಾಜು ಅರಸು ಜಿಲ್ಲೆಯಾಗಿ ಮಾಡುವುದು ಖಚಿತ- ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ನುಡಿ…

kannada t-shirts

ಹುಣಸೂರು,ನ,18,2019(www.justkannada.in):  ಚುನಾವಣಾ ನಂತರ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ  ಹುಣಸೂರನ್ನ ದೇವರಾಜು ಅರಸು ಜಿಲ್ಲೆಯಾಗಿ ಮಾಡುವುದು ಖಚಿತ  ಎಂದು  ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಹೆಚ್.ವಿಶ್ವನಾಥ್ ನುಡಿದರು.

ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ  ಎಸಿ ಕಚೇರಿಯಲ್ಲಿ ಹೆಚ್ ವಿಶ್ವನಾಥ್ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ವಿಶ್ವನಾಥ್,  ಉಪಚುಣಾವಣೆಯಲ್ಲಿ ಮತ್ತೊಮ್ಮೆ  ಜನ ನನ್ನನ್ನು ಆಯ್ಕೆ ಮಾಡುವ ವಿಶ್ವಾಸವಿದೆ. ನನ್ನ ಚಿಹ್ನೆ ಕಮಲದ ಹೂ ನಿಜ. ಕಾಲಚಕ್ರದಲ್ಲಿ ಭಾರತದ ರಾಜಕಾರಣ ಜಡವಲ್ಲ ಜಂಗಮ. ಆದ್ದರಿಂದ ನಾನು ಕಮಲ ಹಿಡಿದು ನಿಮ್ಮ ಮುಂದೆ ಬಂದಿದ್ದೇನೆ. ಭಾರತದ ರಾಜಕಾರಣ ಹರಿಯುವ ನೀರು.  ವಿಶ್ವನಾಥ್ ಅಸಮರ್ಥ ಅಲ್ಲ. ಎರಡು ಪಕ್ಷ ದವರಿಗೆ ಬೇರೇನಿಲ್ಲದೆ ಅನರ್ಹರು ಪಕ್ಷಾಂತರಿಗಳು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಾವು ಅರ್ಹರು ಎಲ್ಲಾ ವಿಚಾರದಲ್ಲೂ ನಾವು ಜಂಗಮರು. ನಮ್ಮ ಬಗ್ಗೆ ಹೇಳಲು ಬೇರೆನಿಲ್ಲ. ಆದ್ದರಿಂದ ಬರಿ ಇವನ್ನೆ ಹೇಳುತ್ತಾರೆ. ಸುಪ್ರೀಂ ಕೋರ್ಟ್ ನಮಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಮಾಡಿ ಕೊಟ್ಟಿದೆ ಎಂದರು.

ಹುಣಸೂರು ದೇವರಾಜು ಅರಸು ಜಿಲ್ಲೆ ಮಾಡಬೇಕಂಬ ಆಸೆ ನನ್ನದು. ನಮ್ಮದು ಜಿಲ್ಲೆಯಾದರೆ ನಮ್ಮ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಇನ್ನೂ ಸದೃಢವಾಗುತ್ತದೆ. ಇಲ್ಲಿಗೆ ವಿಶ್ವವಿದ್ಯಾಲಯ ಜಿಲ್ಲಾ ಆಸ್ಪತ್ರೆ ಮುಂತಾದ ಸೌಲಭ್ಯಗಳು ಸಿಗುತ್ತದೆ. ಇದು ಚುನಾವಣಾ ಗಿಮಿಕ್ ಅಲ್ಲ. ವಿರೋಧ ಪಕ್ಷಕ್ಕೆ ಇದನ್ನ ತಡೆದುಕೊಳ್ಳಲಾಗುತ್ತಿಲ್ಲ. ಮೂರು ತಾಲ್ಲೂಕು ಇರುವ ರಾಮನಗರ ಜಿಲ್ಲೆಯಾಗಿಲ್ಲವೆ. ನಮ್ಮಲ್ಲಿಯೂ ಆರು ತಾಲ್ಲೂಕುಗಳಿವೆ ಹುಣಸೂರು ಏಕೆ ಜಿಲ್ಲೆಯಾಗಬಾರದು ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

ದೇವರಾಜ ಅರಸುರವರುಗೂ ಜಾತಿ ಇರಲಿಲ್ಲ ಮೋದಿಯವರಿಗೂ ಜಾತಿ ಇಲ್ಲ. ಅಲ್ಪಸಂಖ್ಯಾತರು ಭಯ ಪಡುವ ಅಗತ್ಯವಿಲ್ಲ ಅವರಿಗೆ ಮೋದಿಯವರು ಸಾಕಷ್ಟು ಅಭಿವೃದ್ಧಿಗೆ ಶ್ರಮಪಡುತ್ತಿದ್ದಾರೆ. ನಾನು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ಕೊಟ್ಟಿದ್ದೇನೆ. ಕಳೆದ ವಿಧಾನ ಸಭೆ ಲೋಕಸಭಾ ಚುನಾವಣೆಯಲ್ಲಿ ಮಿಲ್ಟ್ರಿ ಕರೆಸಿ ಚುನಾವಣೆ ನಡೆಸಿದ್ರು. ಆದರೆ ಕಳೆದ ಒಂದು ವರ್ಷದಿಂದ ಯಾವುದೇ ಗಲಾಟೆ ಇಲ್ಲದೆ ಜನ ನೆಮ್ಮದಿಯಿಂದ ಇದ್ದಾರೆ ಎಂದು ಹೇಳಿದರು.

ಭಾಷಣ ಸಂದರ್ಭದಲ್ಲಿ ಜಿಟಿ ದೇವೇಗೌಡರನ್ನ ನೆನೆದ  ಹೆಚ್.ವಿಶ್ವನಾಥ್, ಚಿಕ್ಕಮಾದು ನಿಧನದ ನಂತರ ಜಿಟಿಡಿ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು ಎಂದರು.

Key words: After- election- Devaraja arsu-district-Hunsur- BJP candidate- H.Vishwanath

website developers in mysore