ಕ್ಯಾಪ್ಟನ್’ಶಿಪ್ ಬೇಡ ಎಂದ ಅಫ್ಘಾನಿಸ್ಥಾನದ ಸ್ಟಾರ್ ಬೌಲರ್ ರಶೀದ್‌ ಖಾನ್‌

Promotion

ಬೆಂಗಳೂರು, ಜೂನ್ 05, 2021 (www.justkannada.in): ಅಫ್ಘಾನಿಸ್ಥಾನ ಕ್ರಿಕೆಟ್‌ ತಂಡದ  ಸ್ಟಾರ್‌ ಸ್ಪಿನ್ನರ್‌ ರಶೀದ್‌ ಖಾನ್‌ ಯಾವ ಮಾದರಿಗೂ ನಾಯಕನಾಗಿ ಆಯ್ಕೆಯಾಗಿಲ್ಲ.

ಹೌದು. ಅಫ್ಘಾನಿಸ್ಥಾನ ಕ್ರಿಕೆಟ್‌ ತಂಡಗಳ ನಾಯಕತ್ವದಲ್ಲಿ ಭಾರೀ ಬದಲಾವಣೆ ನಡೆದಿದೆ. ಟಿ20 ನಾಯಕತ್ವದಿಂದ ಸ್ವತಃ ರಶೀದ್ ದೂರ ಸರಿದಿದ್ದಾರೆ.

ತಂಡದ ನಾಯಕನ ಹೊಣೆ ಹೊರುವುದರಿಂದ ನನ್ನ ಬೌಲಿಂಗ್‌ ಮೇಲೆ ಒತ್ತಡ ಬೀಳಲಿದೆ. ಹೀಗಾಗಿ ಕ್ಯಾಪ್ಟನ್ ಶಿಪ್ ಜವಾಬ್ದಾರಿ ನನಗೆ ಬೇಡ ಎಂದು ರಶೀದ್ ಖಾನ್ ತಿಳಿಸಿದ್ದಾರೆ ಎನ್ನಲಾಗಿದೆ.

ನಾಯಕನಿಗಿಂತ ನಾನು ಓರ್ವ ಬೌಲರ್‌ ಆಗಿಯೇ ತಂಡಕ್ಕೆ ಹೆಚ್ಚು ಉಪಯುಕ್ತನಾಗಬಲ್ಲೆ ಎಂದಿದ್ದಾರೆ ಈ ಸ್ಟಾರ್ ಬೌಲರ್.