Thursday, September 17, 2026

BDA Apartments

ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಕಠಿಣ ಕ್ವಾರಂಟೈನ್ ! BDA JK_Adv BDA Adv
Home Front Page ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಕಠಿಣ ಕ್ವಾರಂಟೈನ್ !

ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಕಠಿಣ ಕ್ವಾರಂಟೈನ್ !

ಬೆಂಗಳೂರು, ಜೂನ್ 05, 2021 (www.justkannada.in): ಇಂಗ್ಲೆಂಡ್ ತಲುಪಿರುವ ಟೀಂ ಇಂಡಿಯಾ ಆಟಗಾರರಿಕೆ ಕಠಿಣ ಕ್ವಾರಂಟೈನ್ ತಲೆನೋವಾಗಿ ಪರಿಣಮಿಸಿದೆ!

ಹೌದು. 3 ದಿನಗಳ ಕಾಲ ಕ್ಯಾರೆಂಟೈನ್‌ ಮುಗಿದ ನಂತರ. ಸೌತಾಂಪ್ಟನ್ ಮೈದಾನಕ್ಕೆ ಇಳಿಯುವ ಮೊದಲು ಭಾರತೀಯ ಆಟಗಾರರನ್ನು 3 ದಿನಗಳ ಕಾಲ ನಿರ್ಬಂಧಿಸಲಾಗಿದೆ.

ಈ 3 ದಿನಗಳಲ್ಲಿ ಭಾರತೀಯ ತಂಡದ ಯಾವುದೇ ಆಟಗಾರರು ಪರಸ್ಪರ ಸಂಪರ್ಕಕ್ಕೆ ಬರುವುದಿಲ್ಲ.

ಮೂರು ದಿನಗಳವರೆಗೆ ಕಠಿಣ ಕ್ವಾರೆಂಟೈನ್ ಗೆ ಒಳಗಾಗಬೇಕಾಗುತ್ತದೆ ಎಂದು ಭಾರತೀಯ ಸ್ಪಿನ್ನರ್ ಆಕ್ಸಾರ್ ಪಟೇಲ್ ಬಹಿರಂಗಪಡಿಸಿದ್ದಾರೆ.

ಅಂತಿಮ ಪಂದ್ಯ ಜೂನ್ 18 ರಿಂದ ಪ್ರಾರಂಭವಾಗಲಿರುವುದರಿಂದ ಭಾರತೀಯ ಕ್ರಿಕೆಟ್ ತಂಡವು ಸಿದ್ಧತೆಗಳಿಗೆ ಬಹಳ ಕಡಿಮೆ ಸಮಯವನ್ನು ಹೊಂದಿರುತ್ತದೆ.