Thursday, September 17, 2026

BDA Apartments

ದೇಣಿಗೆ ಕುರಿತ ಸ್ಪಷ್ಟನೆ ನೀಡಿದ ಉಪೇಂದ್ರ BDA JK_Adv BDA Adv
Home Cinema ದೇಣಿಗೆ ಕುರಿತ ಸ್ಪಷ್ಟನೆ ನೀಡಿದ ಉಪೇಂದ್ರ

ದೇಣಿಗೆ ಕುರಿತ ಸ್ಪಷ್ಟನೆ ನೀಡಿದ ಉಪೇಂದ್ರ

ಬೆಂಗಳೂರು, ಜೂನ್ 05, 2021 (www.justkannada.in): ಕೊರೊನಾ ಸಂಕಷ್ಟ ಕಾಲದಲ್ಲಿ ನೆರವು ನೀಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ದೇಣಿಗೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಮುಂದೆ ಯಾರಿಗಾದರೂ ಸಹಾಯ ಮಾಡಬೇಕೆಂದಿದ್ದರೆ ನೇರವಾಗಿ ನೀವೇ ಮಾಡಿ. ನಮ್ಮ ಫೌಂಡೇಷನ್ ಗೆ ದೇಣಿಗೆ ಕೊಡಬೇಡಿ ಎಂದು ಉಪ್ಪಿ ಮನವಿ ಮಾಡಿದ್ದಾರೆ.

ಇನ್ನು ಮುಂದೆ ಹಣ, ಕೊಡುಗೆಗಳನ್ನು ಸ್ವೀಕರಿಸುವುದನ್ನು ನಾವು ನಿಲ್ಲಿಸುತ್ತಿದ್ದೇವೆ. ಇದುವರೆಗೆ ಉಪ್ಪಿ ಫೌಂಡೇಷನ್ ಗೆ ಹರಿದುಬಂದ ಹಣ, ಖರ್ಚಿನ ವಿವರಗಳನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.