‘ದ್ವಿತ್ವ’ ಮೂಲಕ ಅಪ್ಪು ಜೊತೆ ಮತ್ತೆ ಕನ್ನಡಕ್ಕೆ ತ್ರಿಷಾ ?!

Promotion

ಬೆಂಗಳೂರು, 27, ಜುಲೈ 2021 (www.justkannada.in): ನಟಿ ತ್ರಿಷಾ ‘ದ್ವಿತ್ವ’ ಮೂಲಕ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ಎನ್ನಲಾಗಿದೆ.

ಹೌದು. ಪವರ್ ಸ್ಟಾರ್ ನಟನೆಯ ಚಿತ್ರಕ್ಕಾಗಿ ತ್ರಿಷಾ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಈಗಾಗಲೇ ತ್ರಿಷಾ ಬಳಿ ಮಾತುಕತೆ ನಡೆದಿದ್ದು, ಕಥೆ ಕೇಳಿ ತ್ರಿಷಾ ತುಂಬಾ ಇಷ್ಟಪಟ್ಟಿದ್ದಾರಂತೆ ಎನ್ನಲಾಗಿದೆ.

ಆದರೆ ಗ್ರೀನ್ ಸಿಗ್ನಲ್ ನೀಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಅಂದಹಾಗೆ ನಿರ್ದೇಶಕ ಪವರ್ ಕುಮಾರ್ ಕನ್ನಡದಲ್ಲಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ.