ತಮಿಳು ಇಳಯದಳಪತಿ ವಿಜಯ್ ಹುಟ್ಟುಹಬ್ಬದ ರಶ್ಮಿಕಾ ವಿಶ್ ನೋಡಿ ಖುಷ್ ಆದ ಫ್ಯಾನ್ಸ್ !

Promotion

ಬೆಂಗಳೂರು, ಜೂನ್ 24, 2019 (www.justkannada.in): ಸದ್ಯ ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಚಿತ್ರರಂಗದಲ್ಲೂ ಸಾಕಷ್ಟು ಅವಕಾಶಗಳನ್ನು ಪಡೆದು ಮಿಂಚುತ್ತಿರುವ ರಶ್ಮಿಕಾ ಮುಂದೆ ಅಭಿಮಾನಿಗಳು ಹೊಸ ಆಸೆ ಮುಂದಿಟ್ಟಿದ್ದಾರೆ.

ಹೌದು. ತಮಿಳು ಇಳಯದಳಪತಿ ವಿಜಯ್ ಗೆ ರಶ್ಮಿಕಾ ನಾಯಕಿಯಾಗಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆ ಸುದ್ದಿ ಬೇಗ ಬರಲಿ ಎಂದು ಆಶಿಸುತ್ತಿದ್ದಾರೆ.

ನಿನ್ನೆ ವಿಜಯ್ ಹುಟ್ಟುಹಬ್ಬದಂದು ರಶ್ಮಿಕಾ ಶುಭ ಕೋರಿದ್ದಾರೆ. ಈ ಟ್ವೀಟ್ ನೋಡಿ ಅಭಿಮಾನಿಗಳು ರಶ್ಮಿಕಾಗೆ ಬೇಗ ವಿಜಯ್ ಜತೆ ನಿಮ್ಮನ್ನು ನೋಡುವ ನಮ್ಮ ಆಸೆ ನೆರವೇರಿಸಿ ಎಂದು ಕೇಳಿಕೊಂಡಿದ್ದಾರೆ.